ಪೋಲಾರ್ಡ್ ವೀರಾವೇಶ, ಟಿನ್ ಬ್ಯಾರ್ಗೋ ನೈಟ್ ರೈಡರ್ಸ್ ಗೆ ಜಯ
ಕೆರಿಬಿಯನ್ ಪ್ರೀಮಿಯರ್ ಲೀಗ್ 2020 ಯ 17 ನೇ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ವಿರೊಚಿತ ಗೆಲುವು ದಾಖಲಿಸಿತು.

ಪೋರ್ಟ್ ಆಫ್ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್ 2020 ಯ 17 ನೇ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡ ಬಾರ್ಬಡೋಸ್ ಟ್ರಿಡೆಂಟ್ಸ್ ವಿರುದ್ಧ ವಿರೊಚಿತ ಗೆಲುವು ದಾಖಲಿಸಿತು.
ಒಂದು ಬದಿಯಲ್ಲಿ ವಿಕೆಟ್ ಗಳು ಬಡ ಬಡನೇ ಬೀಳುತ್ತಿದ್ದರೂ, ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಟಾರ್ ಆಟಗಾರ ಕಿರನ್ ಪೋಲಾರ್ಡ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟ್ರಿನ್ ಬ್ಯಾರ್ಗೋ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಎರಡು ವಿಕೆಟ್ ಗಳಿಂದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡವನ್ನು ಮಣಿಸಿತು.
ನಿಜಕ್ಕೂ ಕಿರನ್ ನಾಯಕನ ಆಟವಾಡಿ ಅಭಿಮಾನಿಗಳನ್ನು ರಂಜಿಸಿದರು. ಕೇವಲ 28 ಎಸೆತಗಳಲ್ಲಿ 2 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಕಿರನ್ 72 ರನ್ ಸಿಡಿಸಿ ಅಬ್ಬರಿಸಿದರು. ಇವರ ಸೊಗಸಾದ ಬ್ಯಾಟಿಂಗ್ ಪ್ರಭಾವದಿಂದ ಬಾರ್ಬಡೋಸ್ ಟ್ರಿಡೆಂಟ್ಸ್ ಗೆಲುವಿನ ಆಸೆ ಕಮರಿತು.
ಈ ಗೆಲುವಿನ ಮೂಲಕ ನೈಟ್ ರೈಡರ್ಸ್ ತಂಡ ತನ್ನ ಪ್ರಮುಖ ಆಧಾರವಾಗಿದ್ದ ಸುನಿಲ್ ನರೈನ್ ಹಾಗೂ ಡಿಜೆ ಬ್ರಾವೋ ಇಲ್ಲದೇ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


