ಚಹಲ್ ನಿಮ್ಮ ಕಿರಿಕಿರಿ ಹೆಚ್ಚಾಯಿತು ಎಂದ ಗೇಲ್
ಮೈದಾನದಲ್ಲಿ ಎದುರಾಳಿ ತಂಡಗಳಿಗೆ ತಮ್ಮ ಸ್ಪಿನ್ ಮೂಲಕವೇ ಮೋಡಿ ಮಾಡುವ ಭಾರತ ತಂಡದ ಬೌಲರ್ ಯಜ್ವೇಂದ್ರ ಚಹಲ್, ಮೈದಾನದಾಚೆಯೂ ಸದಾ ಕಾಲೆಳೆಯುತ್ತಾ, ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸುತ್ತಾರೆ. ಆದರೆ ಈ ಬಾರಿ ಅವರೇ ಕಾಲಳೆಸಿಕೊಂಡಿದ್ದಾರೆ.

ನವದೆಹಲಿ: ಮೈದಾನದಲ್ಲಿ ಎದುರಾಳಿ ತಂಡಗಳಿಗೆ ತಮ್ಮ ಸ್ಪಿನ್ ಮೂಲಕವೇ ಮೋಡಿ ಮಾಡುವ ಭಾರತ ತಂಡದ ಬೌಲರ್ ಯಜ್ವೇಂದ್ರ ಚಹಲ್, ಮೈದಾನದಾಚೆಯೂ ಸದಾ ಕಾಲೆಳೆಯುತ್ತಾ, ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸುತ್ತಾರೆ. ಆದರೆ ಈ ಬಾರಿ ಅವರೇ ಕಾಲಳೆಸಿಕೊಂಡಿದ್ದಾರೆ.
ಹೌದು..ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ , ಚಹಲ್‌ಗೆ ಕಾಲೆಳೆದಿರುವುದು ಇದೀಗ ಭಾರಿ ವೈರಲ್ ಆಗಿದೆ.
ಇನ್ ಸ್ಟಾ ಗ್ರಾಮ್ ಲೈವ್‌ನಲ್ಲಿ ಮಾತನಾಡಿರುವ ಕ್ರಿಸ್ ಗೇಲ್, ''ಯಜ್ವೇಂದ್ರ ಚಹಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೀನು ತುಂಬಾ ಕಿರಿಕಿರಿ ಮಾಡುತ್ತಿದ್ದೀಯಾ, ಹಾಗಾಗಿ ನಿಮ್ಮನ್ನು ಬ್ಲಾಕ್ ಮಾಡುತ್ತಿದ್ದೇನೆ,'' ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಸಕ್ರಿಯರಾಗಿರುವ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಚಹಲ್, ಲಾಕ್ ಡೌನ್ ಸಮಯದಲ್ಲಿ ಹಿಂದಿಗಿಂತಲೂ ಹೆಚ್ಚಾಗಿ ಮುಳುಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


