ಒಮ್ಮೆ ಸಚಿನ್‌ರನ್ನು ಸ್ಲೆಡ್ಜ್ ಮಾಡಿದ್ದೆ, ಮತ್ತೆ ಮಾಡಲು ಧೈರ್ಯವೇ ಬರಲಿಲ್ಲ: ಸಕ್ಲೈನ್ ಮುಷ್ತಾಕ್
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಆ ಒಂದು ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಮ್ಮೆ ಸ್ಲೆಡ್ಜ್ ಮಾಡಿದ್ದೆ, ಈ ವೇಳೆ ಅವರು ಆಡಿದ ಮಾತು ಕೇಳಿ ನಂತರ ನನಗೆ ಸ್ಲೆಡ್ಜ್ ಮಾಡಲು ಧೈರ್ಯ ಬರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಹೇಳಿದ್ದಾರೆ.
ಅದು ತೊಂಬತ್ತರ ದಶಕದಲ್ಲಿ ನಡೆದ ಘಟನೆ. ಕೆನಡಾದಲ್ಲಿ ನಡೆದಿದ್ದ ಸಹರಾ ಕಪ್ ಟೂರ್ನಿ ವೇಳೆ ನಾನು ಸಚಿನ್ ರನ್ನು ಸ್ಲೆಡ್ಜ್ ಮಾಡಿದ್ದೆ. ಆಗ ಸಚಿನ್ ನನ್ನ ಬಳಿ ಬಂದು ನಾನು ಎಂದಿಗೂ ನಿನ್ನ ಜೊತೆ ಅಸಭ್ಯವಾಗಿ ವರ್ತಿಸುವುದಿಲ್ಲ. ಆದರೆ ನೀವು ಯಾಕೆ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಆಗ ನಾನು ಅವರಿಗೆ ಏನು ಹೇಳಬೇಕೆಂದು ತಿಳಿಯದಷ್ಟು ಮುಜುಗರಕ್ಕೊಳಗಾದೆ. ಆ ನಂತರ ಎಂದಿಗೂ ನಾನು ಅವರನ್ನು ಸ್ಲೆಡ್ಜ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ 47ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಟಿಐ ಸಕ್ಲೈನ್ ಮುಷ್ತಾಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದ್ದು ಈ ವೇಳೆ ಈ ವಿಚಾರವನ್ನು ಮುಷ್ತಾಕ್ ಬಹಿರಂಗಪಡಿಸಿದ್ದಾರೆ.
ಅವರು ನನಗೆ 'ನಾನು ನಿಮ್ಮನ್ನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಹೆಚ್ಚು ಗೌರವಿಸುತ್ತೇನೆ ಎಂದು ಹೇಳಿದರು. ಈ ಮಾತಿನಿಂದ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೆ, ಆನಂತರ ನಾನು ಅವರನ್ನು ಮತ್ತೆ ಸ್ಲೆಡ್ಜ್ ಮಾಡಲಿಲ್ಲ. ನಾನು ಅವರಿಗೆ ಏನು ಹೇಳಿದೆ ಎಂದು ಈಗ ನಾನು ನಿಮಗೆ ಹೇಳಲಾರೆ ಆದರೆ ಆಟದ ನಂತರ ನಾನು ಸಚಿನ್ ಅವರಲ್ಲಿ ಕ್ಷಮೆಯಾಚಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


