ಕ್ರಿಕೆಟ್

ಭಾರತೀಯರು ತಮಗಾಗಿ ಆಡಿದರೆ, ಪಾಕ್ ಬ್ಯಾಟ್ಸ್ ಮನ್ ಗಳು ತಂಡಕ್ಕಾಗಿ ಆಡುತ್ತಾರೆ: ಇಂಜಮಾಮ್ ಉಲ್ ಹಕ್

ಭಾರತೀಯ ಬ್ಯಾಟ್ಸ್ ಮನ್ ಗಳು ತಮಗಾಗಿ ಆಡಿದರೆ ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳು ತಂಡಕ್ಕಾಗಿ ಆಡುತ್ತಿದ್ದರು ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಹೇಳಿದ್ದಾರೆ.

ಭಾರತೀಯರು ತಮಗಾಗಿ ಆಡಿದರೆ, ಪಾಕ್ ಬ್ಯಾಟ್ಸ್ ಮನ್ ಗಳು ತಂಡಕ್ಕಾಗಿ ಆಡುತ್ತಾರೆ: ಇಂಜಮಾಮ್ ಉಲ್ ಹಕ್
ಇಂಜಮಾಮ್ ಉಲ್ ಹಕ್
Published On :

ಲಾಹೋರ್: ಭಾರತೀಯ ಬ್ಯಾಟ್ಸ್ ಮನ್ ಗಳು ತಮಗಾಗಿ ಆಡಿದರೆ ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳು ತಂಡಕ್ಕಾಗಿ ಆಡುತ್ತಿದ್ದರು ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಹೇಳಿದ್ದಾರೆ.

ನಾವು ಭಾರತದ ವಿರುದ್ಧ ಆಟವಾಡುತ್ತಿದ್ದಾಗ, ಅವರ ಬ್ಯಾಟಿಂಗ್ ನಮಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತಿತ್ತು. ನಮ್ಮ ಆಟಗಾರರು 30 ಅಥವಾ 40ಕ್ಕಿಂತ ಕಡಿಮೆ ರನ್ ಗಳಿಸಿದರು ಅವರು ತಂಡಕ್ಕಾಗಿ ಆಡುತ್ತಿದ್ದರು. ಆದರೆ ಭಾರತೀಯರು 100ರನ್ ಗಳಿಸಿದರೂ ಅವರು ತಮಗಾಗಿ ಆಡುತ್ತಿದ್ದರು ಎಂದು ಇಂಜಮಾಮ್ ಅವರು ಚಾಟ್ ಶೋವೊಂದರಲ್ಲಿ ಹೇಳಿದ್ದಾರೆ.

ಇದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವ್ಯತ್ಯಾಸ ಎಂದು ಪಾಕ್ ಮಾಜಿ ನಾಯಕ ಹೇಳಿದ್ದಾರೆ.

ಇಂಜಮಾಮ್ ಅವರು 1991 ರಿಂದ 2007 ರ ನಡುವೆ 120 ಟೆಸ್ಟ್, 378 ಏಕದಿನ ಮತ್ತು 1 ಟಿ 20 ಪಂದ್ಯದಲ್ಲಿ ಆಡಿದ್ದಾರೆ. ಇಂಜಮಾಮ್ ಉಲ್ ಹಕ್ ಅವರು ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸುತ್ತಿದ್ದ ಸಮಯದಲ್ಲಿ ಆಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.