ಅಂಗವಿಕಲರ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಿದ ಭಾರತ ಚಾಂಪಿಯನ್
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆತಿಥ್ಯದಲ್ಲಿ ನಡೆದ ಹತ್ತು ದಿನಗಳ ಟೂರ್ನಿಯ ಫೈನಲ್ ಪಂದ್ಯ

ನವದೆಹಲಿ: ಅಂಗವಿಕಲರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಕ್ಕಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆತಿಥ್ಯದಲ್ಲಿ ನಡೆದ ಹತ್ತು ದಿನಗಳ ಟೂರ್ನಿಯ ಫೈನಲ್ ಪಂದ್ಯ ಮಂಗಳವಾರ ರಾತ್ರಿ ನಡೆಯಿತು. ಅಂತಿಮ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ ಅಂಗವಿಕಲರ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು. ಭಾರತ ನೀಡಿದ ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಂಗ್ಲರು ಗುರಿ ಬೆನ್ನು ಹತ್ತುವಲ್ಲಿ ಪರದಾಡಿದರು. ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳತ್ತಾ ಸಾಗಿದ ಆತಿಥೇಯರು ನಿಗದಿತ ಓವರ್ ಗಳು ಮುಕ್ತಾಯದ ಹೊತ್ತಿಗೆ 9 ವಿಕೆಟ್ ನಷ್ಟಕ್ಕೆ 144 ರನ್ ಗಳನ್ನಷ್ಟೇ ಗಳಿಸಿದರು. ಆ ಮೂಲಕ ಭಾರತದ ಎದುರು 36 ರನ್ ಗಳ ಸೋಲು ಕಂಡರು.
ಭಾರತಕ್ಕೆ ಎಸ್. ರವೀಂದ್ರ (53) ಅರ್ಧಶತಕ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಅಂತೆಯೇ ಬೌಲಿಂಗ್ ನಲ್ಲಿ ಸನ್ನಿ ಗೋಯಟ್ ಮತ್ತು ಕುನಾಲ್ ಫಣಸೆ ತಲಾ 2 ವಿಕೆಟ್ ಕಬಳಿಸಿ ಅಂಗ್ಲರ ಪತನಕ್ಕೆ ಕಾರಣರಾದರು.
ಕೇವಲ 15 ರನ್ ನೀಡಿ 2 ವಿಕೆಟ್ ಕುನಾಲ್ ಫಣಸೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


