ಕೊಹ್ಲಿ, ಸ್ಮಿತ್ ಹಿಂದಿಕ್ಕಿದ ನೇಪಾಳ ಕ್ಯಾಪ್ಟನ್ ಪರಾಸ್ ಖಾಕ್ಡಾ ವಿಶಿಷ್ಟ ದಾಖಲೆ!
ಮೌಂಟ್ ಎವರೆಸ್ಟ್‌ನ ತವರೂರು ನೇಪಾಳ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ಗೆ ನಾಯಕ ಪರಾಸ್ ಖಾಕ್ಡಾ ಭಾಜನರಾಗಿದ್ದಾರೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್ ಜಯ ತಂದುಕೊಟ್ಟ ಖಾಕ್ಡಾ, ಟಿ-20-ಐ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಹೊಂದಿದರು.

ಸಿಂಗಾಪುರ: ಮೌಂಟ್ ಎವರೆಸ್ಟ್‌ನ ತವರೂರು ನೇಪಾಳ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ಗೆ ನಾಯಕ ಪರಾಸ್ ಖಾಕ್ಡಾ ಭಾಜನರಾಗಿದ್ದಾರೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್ ಜಯ ತಂದುಕೊಟ್ಟ ಖಾಕ್ಡಾ, ಟಿ-20-ಐ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ.
ಶನಿವಾರ ನಡೆದ ತ್ರಿಕೋನ ಟಿ-20 ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಂಗಾಪುರ ತನ್ನ ಪಾಲಿನ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 151 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ನೇಪಾಳ ತಂಡ 16 ಓವರ್‌ಗಳಲ್ಲೇ 1 ವಿಕೆಟ್ ನಷ್ಟದಲ್ಲಿ 154 ರನ್‌ಗಳನ್ನು ಚೆಚ್ಚಿ ವಿಜಯೋತ್ಸವ ಆಚರಿಸಿತು.
ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಅನುಭವಿ ಬ್ಯಾಟ್ಸ್‌ಮನ್ ಖಾಕ್ಡಾ, ಕೇವಲ 52 ಎಸೆತಗಳಲ್ಲಿ ಅಜೇಯ 106 ರನ್‌ಗಳನ್ನು ಸಿಡಿಸಿ ವಿಶ್ವ ದಾಖಲೆಯೊಂದಿಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅವರ ಈ ಅದ್ಭುತ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಬರೋಬ್ಬರಿ 9 ಸಿಕ್ಸರ್‌ಗಳು ಮೂಡಿಬಂದವು. ಇದೇ ವೇಳೆ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿದ ಖಾಕ್ಡಾ, ಏಷ್ಯಾದ ನಾಲ್ಕನೇ ಅತ್ಯಂತ ವೇಗದ ಶತಕದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೆ ಮುನ್ನ ಈ ವರ್ಷಾರಂಭದಲ್ಲಿ ನೇಪಾಳ ತಂಡದ ಯುವ ಪ್ರತಿಭೆ ರೋಹಿತ್ ಪೌದೆಲ್ (16 ವರ್ಷ, 146 ದಿನಗಳು), ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕದ ಬಾರಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು. ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


