ಕ್ರಿಕೆಟ್

ಸಂಜು ಸ್ಯಾಮ್ಸನ್ ಇದ್ದಾನೆ ಹುಷಾರ್: ರಿಷಬ್ ಪಂತ್‌ಗೆ ಎಚ್ಚರಿಕೆ ನೀಡಿದ ಗಂಭೀರ್

ನಿನ್ನ ಹಿಂದೆನೇ ಸಂಜು ಸ್ಯಾಮನ್ಸ್ ಇದ್ದಾನೆ ಹುಷಾರ್ ಆಗಿರು ಎಂದು ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಗೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಗಂಭೀರವಾಗಿ ವಾರ್ನ್ ಮಾಡಿದ್ದಾರೆ.

ಸಂಜು ಸ್ಯಾಮ್ಸನ್ ಇದ್ದಾನೆ ಹುಷಾರ್: ರಿಷಬ್ ಪಂತ್‌ಗೆ ಎಚ್ಚರಿಕೆ ನೀಡಿದ ಗಂಭೀರ್
ರಿಷಬ್ ಪಂತ್-ಗೌತಮ್ ಗಂಭೀರ್
Published On :

ನವದೆಹಲಿ: ನಿನ್ನ ಹಿಂದೆನೇ ಸಂಜು ಸ್ಯಾಮನ್ಸ್ ಇದ್ದಾನೆ ಹುಷಾರ್ ಆಗಿರು ಎಂದು ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಗೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಗಂಭೀರವಾಗಿ ವಾರ್ನ್ ಮಾಡಿದ್ದಾರೆ.

ಸತತ ಅವಕಾಶಗಳು ಸಿಗುತ್ತಿದೆ ಅಂತ ಮೈ ಮರಿಬೇಡ. ನಿನ್ನ ಪ್ರದರ್ಶನವನ್ನು ನೋಡಿಕೊಳ್ಳುವುದು ಉತ್ತಮ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ. ನನ್ನ ನೆಚ್ಚಿನ ಆಟಗಾರ ಸ್ಯಾಮ್ಸನ್ ಖಂಡಿತ ರಿಷಬ್ ಗೆ ಸವಾಲಾಗಲಿದ್ದಾರೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿಗೆ ಪರ್ಯಾಯವಾಗಿ ಬೆಳೆಸುವ ಸಲುವಾಗಿ ಆಯ್ಕೆ ಸಮಿತಿ ರಿಷಬ್ ಪಂತ್ ಗೆ ಮೊದಲ ಅವಕಾಶ ನೀಡುತ್ತಿದೆ. ಆದರೆ ಪಂತ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಸ್ಯಾಮ್ಸನ್ ಐಪಿಎಲ್ ಹಾಗೂ ಟೀಂ ಇಂಡಿಯಾ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.