ಐಸಿಸಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಹೊಸ್ತಿಲಲ್ಲಿ ಅಂಪೈರ್ ಭಾರತದ ನಿತಿನ್ ಮೆನನ್
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ಓವರ್ಗಳ ಮಾದರಿಯಲ್ಲಿ ಈಗಾಗಲೇ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಭಾರತದ ನಿತಿನ್ ಮೆನನ್ ಅವರು ಇದೀಗ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.

ನವದೆಹಲಿ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ಓವರ್ಗಳ ಮಾದರಿಯಲ್ಲಿ ಈಗಾಗಲೇ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಭಾರತದ ನಿತಿನ್ ಮೆನನ್ ಅವರು ಇದೀಗ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.
ಮುಂದಿನ ನವೆಂಬರ್ 27 ರಂದು ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೈದಾನದ ತೀರ್ಪುಗಾರರಾಗಿ ನಿತಿನ್ ಮೆನನ್ ಮೈದಾನಕ್ಕೆ ಇಳಿಯಲಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ತೀರ್ಪುಗಾರ ನರೇಂದ್ರ ಮೆನನ್ ಅವರ ಪುತ್ರ ನಿತಿನ್ ಮೆನನ್. ತಮ್ಮ ತಂದೆಯ ಹಾದಿಯಲ್ಲಿ 2005ರಲ್ಲೇ ನಿತಿನ್ ಮೆನನ್ ಅವರು ಮಧ್ಯೆ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ಗೆ ರಾಜ್ಯದ ಪ್ಯಾನಲ್ ತೀರ್ಪುಗಾರರಾಗಿ ಸೇವೆ ಆರಂಭಿಸಿದ್ದರು.
16 ವಯೋಮಿತಿ, 19 ವಯೋಮಿತಿ, 23 ವಯೋಮಿತಿ ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ ನಿತಿನ್ ಅವರು ಮಧ್ಯಪ್ರದೇಶದ ಪ್ರತಿನಿಧಿಸಿದ್ದಾರೆ. 2006ರಲ್ಲಿ ಬಿಸಿಸಿಐ ಆಯೋಜಿಸಿದ್ದ ಅಖಿಲ ಭಾರತ ಅಂಪೈರ್ ಪರೀಕ್ಷೆಯಲ್ಲಿ ನಿತಿನ್ ಮೆನನ್ ಅವರು ಪಾಸಾಗಿದ್ದರು. 2007-08ರ ಆವೃತ್ತಿಯಲ್ಲೇ ಅವರು ದೇಶೀಯ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಸೇವೆ ಆರಂಭಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


