ಕ್ರಿಕೆಟ್

ಧೋನಿಯ ಉದಾಹರಣೆ ನೀಡಿ ಪಾಕ್ ನಾಯಕ ಸರ್ಫರಾಜ್‌ರನ್ನು ಟೀಕಿಸಿದವರಿಗೆ ಪತ್ನಿ ತಿರುಗೇಟು!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯ ಉದಾಹರಣೆ ನೀಡಿ ಪಾಕಿಸ್ತಾನ ನಾಯಕತ್ವದಿಂದ ಕಿಕ್ ಔಟ್ ಆಗಿರುವ ಸರ್ಫರಾಜ್ ಅಹ್ಮದ್ ರಿಗೆ ಪತ್ನಿ ಖುಷ್ ಬಹ್ತ್ ಬೆಂಬಲವಾಗಿ ನಿಂತಿದ್ದಾರೆ.

ಧೋನಿಯ ಉದಾಹರಣೆ ನೀಡಿ ಪಾಕ್ ನಾಯಕ ಸರ್ಫರಾಜ್‌ರನ್ನು ಟೀಕಿಸಿದವರಿಗೆ ಪತ್ನಿ ತಿರುಗೇಟು!
ಎಂಎಸ್ ಧೋನಿ-ಸರ್ಫರಾಜ್-ಖುಷ್
Published On :

ಇಸ್ಲಾಮಾಬಾದ್: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯ ಉದಾಹರಣೆ ನೀಡಿ ಪಾಕಿಸ್ತಾನ ನಾಯಕತ್ವದಿಂದ ಕಿಕ್ ಔಟ್ ಆಗಿರುವ ಸರ್ಫರಾಜ್ ಅಹ್ಮದ್ ರಿಗೆ ಪತ್ನಿ ಖುಷ್ ಬಹ್ತ್ ಬೆಂಬಲವಾಗಿ ನಿಂತಿದ್ದಾರೆ. 

ಪಾಕ್ ತಂಡ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಲಾಗಿತ್ತು. ಇದರ ಬೆನ್ನಲ್ಲೇ ಟೂರ್ನಿಯೊಂದರಿಂದಲೂ ಸರ್ಫರಾಜ್ ನನ್ನು ಕೈಬಿಡಲಾಗಿತ್ತು. ಇದಕ್ಕೆ ನೆಟಿಗರು ಅಹ್ಮದ್ ರನ್ನು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಪತ್ನಿ ಖುಷ್ ಎಂಎಸ್ ಧೋನಿಯ ಉದಾಹರಣೆ ನೀಡಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.

38 ವರ್ಷದ ಎಂಎಸ್ ಧೋನಿಯವರೇ ಟೀಂ ಇಂಡಿಯಾದ ಪರವಾಗಿ ಆಡುವಾಗ ತಮ್ಮ ಪತಿ ಯಾಕೆ ಕ್ರಿಕೆಟ್ ಆಡಬಾರದು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮರ್ಥರಾಗಿ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ. 

Story image

ಪಾಕಿಸ್ತಾನ ತಂಡ 2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಸರ್ಫರಾಜ್ ಅಹ್ಮದ್ ನಾಯಕತ್ವದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ ಕ್ರೀಡಾಪಟುವಾಗಿದ್ದು ಹೊಟ್ಟೆ ಬೆಳಸಿಕೊಂಡಿದ್ದ ಸರ್ಫರಾಜ್ ಆಟದ ಮಧ್ಯೆ ಆಕಳಿಸಿದ್ದಕ್ಕೂ ಟೀಕಿಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.