ರಾಂಚಿ ಟೆಸ್ಟ್: ಫಾಲೋ ಆನ್‌ಗೆ ಸಿಲುಕಿ ತಿಣುಕಾಡಿದ ಆಫ್ರಿಕಾ, ಟೀಂ ಇಂಡಿಯಾ ಗೆಲುವಿಗೆ 2 ವಿಕೆಟ್ ಬಾಕಿ!
ವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು ಎರಡು ವಿಕೆಟ್ ಅಷ್ಟೇ ಉರುಳಿಸಬೇಕಿದೆ.

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು ಎರಡು ವಿಕೆಟ್ ಅಷ್ಟೇ ಉರುಳಿಸಬೇಕಿದೆ.
ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಮುಕ್ತಾಯಕ್ಕೆ ಆಫ್ರಿಕಾ ತಂಡ 132 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 497 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಆಫ್ರಿಕಾ ತಂಡ 162 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಸಿಲುಕಿತ್ತು. ಫಾಲೋ ಆನ್ ನಿಂದ ತಪ್ಪಿಸಿಕೊಂಡು ಮುನ್ನಡೆ ಸಾಧಿಸಬೇಕಿದ್ದರೆ ಆಫ್ರಿಕಾ ತಂಡ 335 ರನ್ ಪೇರಿಸಬೇಕಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಫ್ರಿಕಾ 132 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.
ಆಫ್ರಿಕಾ ತಂಡದ ಥ್ಯೂನಿಸ್ ಡಿ ಬ್ರೂಯಿನ್ ಅಜೇಯ 30 ಹಾಗೂ ಅನ್ರಿಚ್ ನಾರ್ಟ್ಜೆ ಅಜೇಯ 5 ರನ್ ಗಳಿಸಿದ್ದು ನಾಳೆ ನಾಲ್ಕನೇ ದಿನದಾಟ ಆರಂಭಿಸಲಿದ್ದಾರೆ. ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಬೇಕಾದರೆ ಇನ್ನು 203 ರನ್ ಗಳ ಅವಶ್ಯಕತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


