3ನೇ ಟೆಸ್ಟ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ದ.ಆಫ್ರಿಕಾ, ಸಂಕಷ್ಟದಲ್ಲಿ ಡುಪ್ಲೆಸಿಸ್ ಬಳಗ
ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.

ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.
ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 130 ರನ್ ಗಳಿಗೆ ವಿಕೆಟ್ ಕಳೆದುಕೊಂಡಿದೆ. ಆಫ್ರಿಕಾ ಪರ ಹಮ್ಜಾ (62 ರನ್) ಮತ್ತು ಭವುಮಾ (32 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನಕ್ಕೆ ತತ್ತರಿಸಿ ವಿಕೆಟ್ ಕೈ ಚೆಲ್ಲಿದರು. ಆರಂಭದಿಂದಲೂ ನಿಗದಿತವಾಗಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿದ್ದ ಆಫ್ರಿಕಾ ತಂಡಕ್ಕೆ ವೇಗಿಗಳಾದ ಮಹಮದ್ ಶಮಿ, ಉಮೇಶ್ ಯಾದವ್ ಆಘಾತ ನೀಡಿದರೆ, ಹಮ್ಜಾ ವಿಕೆಟ್ ಪಡೆಯುವ ಮೂಲಕ ರವೀಂದ್ರ ಆಫ್ರಿಕಾಗೆ ಮರ್ಮಾಘಾತ ನೀಡಿದರು.
ಇತ್ತೀಚಿನ ವರದಿಗಳು ಬಂದಾಗ ಆಫ್ರಿಕಾ ತಂಡ 131 ರನ್ ಗಳಿಸಿದ್ದು, 8 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಶೆಬಾಜ್ ನದೀಮ್ ಪದಾರ್ಪಣೆ ಪಂದ್ಯದಲ್ಲೇ ಮೊದಲ ವಿಕೆಟ್ ಗಳಿಸಿದ್ದು, ಆಫ್ರಿಕಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಬವುಮಾರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ. ಇನ್ನುಳಿದಂತೆ ಮಹಮದ್ ಶಮಿ, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದ್ದಾರೆ.
16 ರನ್ ಗಳಿಸಿರುವ ಲಿಂಡೆ ಮತ್ತು ಖಾತೆ ತೆರೆಯದ ನಾರ್ಟ್ಜೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Related Article
ರೋಹಿತ್ ದ್ವಿಶತಕ, ರಹಾನೆ ಶತಕ: ಭಾರತ 497 ರನ್ ಗಳಿಗೆ ಡಿಕ್ಲೇರ್, ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ
ಚೊಚ್ಚಲ 'ದ್ವಿಶತಕ' ಸಿಡಿಸಿದ ಹಿಟ್‍ಮನ್ ರೋಹಿತ್ ಶರ್ಮಾ!
ರಾಂಚಿ ಟೆಸ್ಟ್ : ರೋಹಿತ್, ರಹಾನೆ ಉತ್ತಮ ಜೊತೆಯಾಟ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೇಲುಗೈ
ಮಾನಸಿಕ ಹೊಂದಾಣಿಕೆಯೇ ರೋಹಿತ್ ಯಶಸ್ಸಿನ ಮೂಲಮಂತ್ರ: ವಿಕ್ರಮ್ ರಾಥೋಡ್
ಮೂರನೇ ಟೆಸ್ಟ್: ಮೊದಲ ದಿನ ಭಾರತಕ್ಕೆ ರೋಹಿತ್, ರಹಾನೆ ಆಸರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


