ಕ್ರಿಕೆಟ್

ತಾರಕಕ್ಕೇರಿದ ಬಾಂಗ್ಲಾ ಕ್ರಿಕೆಟಿಗರ ಪ್ರತಿಭಟನೆ, ಭಾರತ ಪ್ರವಾಸ ರದ್ದು ಸಾಧ್ಯತೆ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸುತ್ತಿದ್ದ ಪ್ರತಿಭಟನೆ ಇದೀಗ ತಾರಕ್ಕೇರಿದ್ದು, ಮುಂಬರುವ ಭಾರತ ಪ್ರವಾಸವನ್ನು ಆಟಗಾರರು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾರಕಕ್ಕೇರಿದ ಬಾಂಗ್ಲಾ ಕ್ರಿಕೆಟಿಗರ ಪ್ರತಿಭಟನೆ, ಭಾರತ ಪ್ರವಾಸ ರದ್ದು ಸಾಧ್ಯತೆ!
ಸಂಗ್ರಹ ಚಿತ್ರ
Published On :

ಢಾಕಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸುತ್ತಿದ್ದ ಪ್ರತಿಭಟನೆ ಇದೀಗ ತಾರಕ್ಕೇರಿದ್ದು, ಮುಂಬರುವ ಭಾರತ ಪ್ರವಾಸವನ್ನು ಆಟಗಾರರು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಟಗಾರರು ಮುಂದಿಟ್ಟಿರುವ 11 ಅಂಶಗಳನ್ನುಈಡೇರಿಸುವಂತೆ ಕ್ರಿಕೆಟಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬೇಡಿಕೆ ಏಡೇರಿಸದಿದ್ದರೆ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಆಟಗಾರರು ಘೋಷಣೆ ಮಾಡಿದ್ದಾರೆ. ಅಲ್ಲದೆ ಹಾಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಿಗಳನ್ನು ಕೂಡ ಆಟಗಾರರು ಮೊಟಕುಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಇದೇ ನವೆಂಬರ್ 3ರಿಂದ ಆರಂಭವಾಗಬೇಕಿದ್ದ ಭಾರತ-ಬಾಂಗ್ಲಾದೇಶ ಸರಣಿ ಮೇಲೆ ಇದೀಗ ಕರಿನೆರಳು ಬಿದ್ದಿದ್ದು, ಇಡೀ ಟೂರ್ನಿ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಇನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ಹಿರಿಯ ಆಟಗಾರರಾದ ಶಕಿಬ್ ಅಲ್ ಹಸನ್, ಮಹಮುದುಲ್ಲಾ, ಮುಷ್ಫಿಕರ್ ರಹೀಮ್ ಸೇರಿದಂತೆ ಎಲ್ಲ ಆಟಗಾರರೂ ಪಾಲ್ಗೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಈ ವೇಳೆ ಮಾತನಾಡಿದ ಆಟಗಾರರು ಬಿಸಿಬಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ಭಾವಿಸಿದ್ದೇವೆ. ಇದು ದಂಗೆ ಏಳುವ ಸ್ಥಿತಿಯಲ್ಲ. ಆದರೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲೇ ಬೇಕಾದ ಮತ್ತು ಅದನ್ನು ಹರಿಸಿಕೊಳ್ಳಬೇಕಿದೆ ಎಂದು ಆಟಗಾರರು ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಸಿಬಿ ಸಿಇಒ ನಿಜಾಮುದ್ದೀನ್ ಚೌದರಿ ಅವರು ಆಟಗಾರರ ಬೇಡಿಕೆಗಳನ್ನು ಆಲಿಸಿದ್ದು, ಶೀಘ್ರ ಅವುಗಳ ನೆರವೇರಿಸುವ ಕುರಿತು ಕಾರ್ಯಚರಣೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.