ಬಿಸಿಸಿಐ ಬಾಸ್ ಆಗಲಿರುವ ಗಂಗೂಲಿಯಿಂದ ಸಚಿನ್ ನಿರೀಕ್ಷೆ ಏನು ಗೊತ್ತ?
ಟೀಂ ಇಂಡಿಯಾದ ಯಶಸ್ವಿ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಇದರ ಮಧ್ಯೆ ನೂತನ ಬಿಸಿಸಿಐ ಬಾಸ್ ಆಗಲಿರುವ ಗಂಗೂಲಿಯಿಂದ ಸಚಿನ್ ತೆಂಡೂಲ್ಕರ್ ಏನನ್ನು ನಿರೀಕ್ಷಿಸಲಿದ್ದೇನೆ...

ಮುಂಬೈ: ಟೀಂ ಇಂಡಿಯಾದ ಯಶಸ್ವಿ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಇದರ ಮಧ್ಯೆ ನೂತನ ಬಿಸಿಸಿಐ ಬಾಸ್ ಆಗಲಿರುವ ಗಂಗೂಲಿಯಿಂದ ಸಚಿನ್ ತೆಂಡೂಲ್ಕರ್ ಏನನ್ನು ನಿರೀಕ್ಷಿಸಲಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿಯಾಗಿ ಆಡಿದಂತೆಯೇ ಅದೇ ಉತ್ಸಾಹದಿಂದ ಬಿಸಿಸಿಐನ ಅಧ್ಯಕ್ಷರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಸಚಿನ್ ತೆಂಡೂಲ್ಕರ್ ನಿರೀಕ್ಷಿಸುತ್ತಿದ್ದಾರೆ.
ಗಂಗೂಲಿ ತಮ್ಮ ವೃತ್ತಿ ಕ್ರಿಕೆಟ್ ಆಡಿದ ರೀತಿ ಮತ್ತು ಅವರು ಹೊರಗೆ ಹೋಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ರೀತಿಯಲ್ಲೇ (ಬಿಸಿಸಿಐ ಅಧ್ಯಕ್ಷರಾಗಿ) ಅದೇ ಸಾಮರ್ಥ್ಯದಲ್ಲಿ ಅದೇ ಉತ್ಸಾಹ ಮತ್ತು ಅದೇ ಗಮನದಿಂದ ಸೇವೆ ಸಲ್ಲಿಸುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಅಂದರೆ ಅವರ ಬಗ್ಗೆ ನನಗೆ ಏನು ಗೊತ್ತು ಎಂದು ಸಚಿನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಗಂಗೂಲಿ ಅವರು ಅಕ್ಟೋಬರ್ 23ರಂದು ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


