ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಟೀಂ ಇಂಡಿಯಾ ಕೀಪರ್ ಸಾಹಾ, ವಿಡಿಯೋ ವೈರಲ್!
ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಈ ಮಧ್ಯೆ ಟೀಂ ಇಂಡಿಯಾ ಕೀಪರ್ ವೃದ್ಧಿಮಾನ್ ಸಾಹಾ ಎದ್ದು ಬಿದ್ದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಪುಣೆ: ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಈ ಮಧ್ಯೆ ಟೀಂ ಇಂಡಿಯಾ ಕೀಪರ್ ವೃದ್ಧಿಮಾನ್ ಸಾಹಾ ಎದ್ದು ಬಿದ್ದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಫಾಲೋ ಆನ್‍ಗೆ ಸಿಲುಕಿ ದ್ವಿತೀಯ ಇನಿಂಗ್ಸ್ ಆರಂಭಸಿದ ದಕ್ಷಿಣ ಆಫ್ರಿಕಾ ತಂಡದ ಡುಪ್ಲೇಸಿಸ್ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಚೆಂಡನ್ನು ಡಿಪೆನ್ಸ್ ಆಡಲು ಮುಂದಾದರು. ಆದರೆ ಚೆಂಡು ಬ್ಯಾಟ್ ತಗುಲಿ ಕೀಪರ್ ಕಡೆ ಹೋಯಿತು.
ಮೊದಲಿಗೆ ಚೆಂಡು ಗ್ಲೌಸ್ ಗೆ ತಗುಲಿ ಮುಂದಕ್ಕೆ ಚಿಮ್ಮಿತ್ತು. ಈ ವೇಳೆ ಸಾಹಾ ಮತ್ತೊಮ್ಮೆ ಚೆಂಡನ್ನು ಹಿಡಿಯಲು ಮುಂದಾದರು ಆಗಲು ಚೆಂಡು ಕೈಗೆ ಸಿಗದೆ ಕೆಳಗೆ ಬೀಳುತ್ತಿತ್ತು. ಈ ವೇಳೆ ಸಾಹಾ ಗ್ಲೌಸ್ ನಿಂದ ಚೆಂಡನ್ನು ಮುಂದಕ್ಕೆ ಹೊಡೆದು ನಂತರ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದ್ದಾರೆ.
ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್ ಗಳಿಂದ ಗೆಲುವಿನ ನಗೆ ಬೀರಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 601 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಸಿಲುಕಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ 189 ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ ಶರಣಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


