ವಿಶ್ವಕಪ್‍ನಲ್ಲಿ ತಂಡದ ಪ್ರದರ್ಶನ ಮುಂದಿನ ತಲೆಮಾರಿಗೆ ಸ್ಫೂರ್ತಿ: ಫರ್ಗೂಸನ್
ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ನ್ಯೂಜಿಲೆಂಡ್ ವಿಫಲವಾಗಿರಬಹುದು. ಆದರೆ, ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನವು ಮುಂದಿನ ತಲೆಮಾರಿನ ಬ್ಲ್ಯಾಕ್ ಕ್ಯಾಪ್ಸ್ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಕಿವೀಸ್ ವೇಗಿ ಲೂಕಿ ಫರ್ಗುಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುಬೈ: ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ನ್ಯೂಜಿಲೆಂಡ್ ವಿಫಲವಾಗಿರಬಹುದು. ಆದರೆ, ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನವು ಮುಂದಿನ ತಲೆಮಾರಿನ ಬ್ಲ್ಯಾಕ್ ಕ್ಯಾಪ್ಸ್ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಕಿವೀಸ್ ವೇಗಿ ಲೂಕಿ ಫರ್ಗುಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಜುಲೈನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ರೋಚಕತೆ ಕೆರಳಿಸಿತ್ತು. ಈ ಪಂದ್ಯದಲ್ಲಿ ನಿಗದಿತ 50 ಓವರ್‍ಗಳಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ಪ್ರದರ್ಶನ ಸಮಬಲವಾಗಿತ್ತು. ಅಲ್ಲದೇ, ಸೂಪರ್ ಓವರ್‍ನಲ್ಲೂ ಪಂದ್ಯ ಟೈ ಆಗಿತ್ತು. ಆದರೆ, ಬೌಂಡರಿ ನಿಯಮದ ಆಧಾರದಲ್ಲಿ ಆಂಗ್ಲರಿಗೆ ಚಾಂಪಿಯನ್ ಪಟ್ಟ ನೀಡಲಾಗಿತ್ತು.
ಭವಿಷ್ಯದ ದಿನಗಳಲ್ಲಿ ತಂಡ ಬಲಿಷ್ಟವಾಗಲು ಇಂಥ ಪಂದ್ಯಗಳು ನಿಜಕ್ಕೂ ಮಾದರಿಯಾಗಲಿದೆ.ಟೂರ್ನಿಯುದ್ದಕ್ಕೂ ನ್ಯೂಜಿಲೆಂಡ್ ಹಲವು ಏಳು ಬೀಳುಗಳನ್ನು ಕಂಡಿತ್ತು. ಒಂದು ಹಂತದಲ್ಲಿ ತಂಡ ಸೆಮಿಫೈನಲ್ ಹಾದಿ ಕಠಿಣವಾಗಿತ್ತು.ಆದರೂ, ತಂಡದ ಆಟಗಾರರು ಅಗತ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದರು.ಇದು ಫೈನಲ್‍ಗೇರಲು ಸಹಾಯವಾಗಿತ್ತು. ಇದು ಮುಂದಿನ ತಲೆಮಾರಿನ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಖಂಡಿತ ಮಾದರಿಯಾಗಲಿದೆ ಎಂದು ಫರ್ಗೂಸನ್ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


