ಕ್ರಿಕೆಟ್

'ಮಾಯವಾಯ್ತ ಚೆಂಡು'?: ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕಲು ಪರದಾಡಿದ ಫೀಲ್ಡರ್ಸ್, ವಿಡಿಯೋ ನೋಡಿ ನಗ್ತೀರಾ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಿಡಿಸಿದ ಚೆಂಡು ಬೌಂಡರಿ ಗೆರೆಯಲ್ಲಿ ದಿಢೀರ್ ಅಂತ ಮಾಯವಾಯ್ತಾ. ಹೌದು ಅನ್ನುವಂತೆ ಕೆಲವೊತ್ತು ಫೀಲ್ಡರ್ಸ್ ಚೆಂಡನ್ನು ಹುಡುಕಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

'ಮಾಯವಾಯ್ತ ಚೆಂಡು'?: ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕಲು ಪರದಾಡಿದ ಫೀಲ್ಡರ್ಸ್, ವಿಡಿಯೋ ನೋಡಿ ನಗ್ತೀರಾ!
ಕ್ರಿಕೆಟ್ ಬಾಲ್
Published On :

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಿಡಿಸಿದ ಚೆಂಡು ಬೌಂಡರಿ ಗೆರೆಯಲ್ಲಿ ದಿಢೀರ್ ಅಂತ ಮಾಯವಾಯ್ತಾ. ಹೌದು ಅನ್ನುವಂತೆ ಕೆಲವೊತ್ತು ಫೀಲ್ಡರ್ಸ್ ಚೆಂಡನ್ನು ಹುಡುಕಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. 

ಮಹಾರಾಜ್ ಬೌಲಿಂಗ್ ನಲ್ಲಿ ಜಡೇಜಾ ಚೆಂಡನ್ನು ಬಾರಿಸಿದರು. ಚೆಂಡು ಬೌಂಡರಿಯಲ್ಲಿ ಹಾಕಲಾಗಿದ್ದ ರೂಫ್ಗೆ ಸಿಲುಕಿಕೊಂಡಿದೆ. ಮೊದಲಿಗೆ ಚೆಂಡು ಯಾರಿಗೂ ಕಾಣಸಿಕ್ಕಿರಲಿಲ್ಲ. ಫೀಲ್ಡರ್ಸ್ ಜೊತೆಗೆ ಬಾಲ್ ಬಾಯ್ ಗಳು ಸಹ ಚೆಂಡನ್ನು ಹುಡುಕಾಡುತ್ತಿದ್ದರು. ಈ ಮಧ್ಯೆ ಕ್ಯಾಮೆರಾ ಮ್ಯಾನ್ ಜೂಮ್ ಹಾಕಿ ಚೆಂಡನ್ನು ತೋರಿಸಿದರು. 

ಆದರೆ ಬೌಂಡರಿ ಗೆರೆಯಲ್ಲಿ ಚೆಂಡನ್ನು ಹುಡುಕುತ್ತಿದ್ದವರು ಟಿವಿ ಪರದೆಯನ್ನು ನೋಡದ ಅವರಿಗೆ ತಿಳಿಯಲಿಲ್ಲ. ಈ ವೇಳೆ ಮಾರ್ಕನ್ ಓಡಿ ಬಂದು ಚೆಂಡನ್ನು ತೆಗೆದುಕೊಂಡರು. ಈ ವಿಡಿಯೋ ನೆರೆದಿದ್ದ ಪ್ರೇಕ್ಷಕರಲ್ಲಿ ನಗು ಬರಿಸಿತ್ತು. 

ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 502 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ದಕ್ಷಿಣ ಆಫ್ರಿಕಾ 431 ಗಳಿಗೆ ಆಲೌಟ್ ಆಯಿತು. 71 ರನ್ ಗಳ ಮುನ್ನಡೆಯೊಂದಿಗೆ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.