ಕ್ರಿಕೆಟ್

ಕ್ಯಾಚ್ ಔಟ್, ಆದ್ರೆ ಕೊಟ್ಟಿದ್ದು ನಾಟೌಟ್: ಫೀಲ್ಡರ್ ಮುತ್ತುಸ್ವಾಮಿ ತಪ್ಪಿನಿಂದಾಗಿ ರೋಹಿತ್ ಗೆ ಅದೃಷ್ಟ, ವಿಡಿಯೋ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ಬಾರಿಸಿದ ಚೆಂಡು ಫೀಲ್ಡರ್ ಕೈ ಸೇರಿತ್ತು. ಆದರೆ ಅಂಪೈರ್ ಮಾತ್ರ ಸಿಕ್ಸ್ ಕೊಟ್ಟಿದ್ದಾರೆ.

ಕ್ಯಾಚ್ ಔಟ್, ಆದ್ರೆ ಕೊಟ್ಟಿದ್ದು ನಾಟೌಟ್: ಫೀಲ್ಡರ್ ಮುತ್ತುಸ್ವಾಮಿ ತಪ್ಪಿನಿಂದಾಗಿ ರೋಹಿತ್ ಗೆ ಅದೃಷ್ಟ, ವಿಡಿಯೋ!
ರೋಹಿತ್ ಶರ್ಮಾ-ಮುತ್ತುಸ್ವಾಮಿ
Published On :

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ಬಾರಿಸಿದ ಚೆಂಡು ಫೀಲ್ಡರ್ ಕೈ ಸೇರಿತ್ತು. ಆದರೆ ಅಂಪೈರ್ ಮಾತ್ರ ಸಿಕ್ಸ್ ಕೊಟ್ಟಿದ್ದಾರೆ.

ವಿಶಾಖಪಟ್ಟಣಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಫ್ರಿಕಾದ ಪೈಡಿ ಎಸೆತವನ್ನು ಬಿರುಸಿನಿಂದ ಹೊಡೆದರು. ಚೆಂಡು ಬೌಂಡರಿಯತ್ತ ಹೋಗುತ್ತಿತ್ತು. ಈ ವೇಳೆ ಫೀಲ್ಡರ್ ಕ್ಯಾಚ್ ಹಿಡಿದರು. ಆದರೆ ಅವರ ಕಾಲು ಬೌಂಡರಿ ಗೆರೆಗೆ ತಗುಲಿದ್ದರಿಂದ ಔಟ್ ಎಂದು ಹೋಗುತ್ತಿದ್ದ ರೋಹಿತ್ ಶರ್ಮಾ ನಿಟ್ಟುಸಿರು ಬಿಟ್ಟಿದ್ದರು. 

ರಿವ್ಯೂನಲ್ಲಿ ಪರೀಕ್ಷಿಸಿದಾಗ ಫೀಲ್ಡರ್ ಬೌಂಡರಿ ಗೆರೆ ಮುಟ್ಟಿರುವುದು ಕಂಡು ಬಂದಿದ್ದು ಅಂಪೈರ್ ಔಟ್ ಬದಲಿಗೆ ಸಿಕ್ಸರ್ ಎಂದು ತೀರ್ಪು ನೀಡಿದ್ದಾರೆ.

ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 502 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ದಕ್ಷಿಣ ಆಫ್ರಿಕಾ 431 ಗಳಿಗೆ ಆಲೌಟ್ ಆಯಿತು. 71 ರನ್ ಗಳ ಮುನ್ನಡೆಯೊಂದಿಗೆ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು 1 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.