ಪವನ್ ದೇಶ್‍ಪಾಂಡೆ ಸ್ಫೋಟಕ ಫಿಫ್ಟಿ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
ಹೆರಂಬ್ ಪರಬ್ (24 ಕ್ಕೆ 5 ) ಐದು ವಿಕೆಟ್ ಗೊಂಚಲು ನಡುವೆಯೂ ಮಧ್ಯಮ ಕ್ರಮಾಂಕದ ಪವನ್ ದೇಶ್‍ಪಾಂಡೆ (63 ರನ್, 32 ಎಸೆತಗಳು) ಅವರ ಮೌಲ್ಯಯುತ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡಕ್ಕೆ ಸ್ಪರ್ಧಾತ್ಮ ಗುರಿ ನೀಡಿದೆ.

ವಿಜಯಶಂಕರಂ: ಹೆರಂಬ್ ಪರಬ್ (24 ಕ್ಕೆ 5 ) ಐದು ವಿಕೆಟ್ ಗೊಂಚಲು ನಡುವೆಯೂ ಮಧ್ಯಮ ಕ್ರಮಾಂಕದ ಪವನ್ ದೇಶ್‍ಪಾಂಡೆ (63 ರನ್, 32 ಎಸೆತಗಳು) ಅವರ ಮೌಲ್ಯಯುತ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡಕ್ಕೆ ಸ್ಪರ್ಧಾತ್ಮ ಗುರಿ ನೀಡಿದೆ.
ಇಲ್ಲಿನ ಡಾ. ಪಿ.ವಿ.ಜಿ ರಾಜು ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ನಿಗದಿತ 20 ಓವರ್ ಗಳಿಗೆ 9 ವಿಕೆಟ್ ಕಳೆದುಕೊಂಡು 172 ರನ್ ದಾಖಲಿಸಿತು. ಆ ಮೂಲಕ ಎದುರಾಳಿ ಗೋವಾ ತಂಡಕ್ಕೆ 173 ರನ್ ಗುರಿ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿತು. ಅದ್ಭುತ ಲಯದಲ್ಲಿದ್ದ ದೇವದತ್ತ ಪಡಿಕ್ಕಲ್(11) ಹಾಗೂ ನಾಯಕ ಮನೀಷ್ ಪಾಂಡೆ (17) ಇವರಿಬ್ಬರು ಹೆರಂಬ್ ಪರಾಬ್‍ಗೆ ವಿಕೆಟ್ ಬಹುಬೇಗ ವಿಕೆಟ್ ಒಪ್ಪಿಸಿದರು. ಒಂದು ಹಂದತಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಕರುಣ್ ನಾಯರ್ 21 ರನ್ ಗಳಿಸಿ ಔಟ್ ಆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


