ಕ್ರಿಕೆಟ್

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್​: ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಾಂ ಅರೆಸ್ಟ್

ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್‌ನ ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್​: ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಾಂ ಅರೆಸ್ಟ್
ಸಯ್ಯಾಂ
Published On :

ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್‌ನ ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಸಯ್ಯಾಂ ಓರ್ವ ಅಂತರಾಷ್ಟ್ರೀಯ ಮಟ್ಟದ ಬುಕ್ಕಿಯಾಗಿದ್ದು ಕೆಪಿಎಲ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ. 

ನಿನ್ನೆ ರಾತ್ರಿ ವಿದೇಶದಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾನೆ ಎಂಬಖಚಿತ ಮಾಹಿತಿ ಪಡೆದ ಸಿಸಿಬಿ ಅಲ್ಲಿಯೇ ಆತನನ್ನು ಬಂಧಿಸಿದ್ದಾರೆ. 

ಫಿಕ್ಸಿಂಗ್‌ ಪ್ರಕರಣ್ಕಕೆ ಸಂಬಂಧಿಸಿ ಹಲವು ರಹಸ್ಯ ಮಾಹಿತಿಗಳು ಸಯ್ಯಾಂ ಬಳಿ ಇದ್ದು ಅಂತರಾಷ್ಟ್ರೀಯ ಆಟಗಾರರೊಡನೆ ಸಹ ಸಂಪರ್ಕ ಹೊಂದಿದ್ದನೆಂಬ ಮಾಹಿತಿ ಇದೆ. ಅಷ್ಟೇ ಅಲ್ಲದೆ ಹಗರಣದ ಪ್ರಮುಖ ಆರೋಪಿತ ಭವೇಶ್ ಬಾಪ್ನ ಜೊತೆ  ಸಹ ಸಯ್ಯಾಂ ನಿಕಟ ಸಂಪರ್ಕ ಹೊಂದಿದ್ದ. 

ಇನ್ನು ಹಗರಣದ ತನಿಖೆ ಚುರುಕಾಗಿಸಿರುವ ಸಿಸಿಬಿ ಅಧಿಕಾರಿಗಳು ಇದಾಗಲೇ ಗಾವಿ ಫ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ ತಂಡದ ಕೆಲ ಆತಗಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ,

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.