50 ರನ್ ಸಿಡಿಸಿದ ಆತುರದಲ್ಲಿ ಅದೇ ಎಸೆತದಲ್ಲಿ ರನೌಟ್ ಆದ ಪಾಕ್ ಕ್ರಿಕೆಟಿಗ, ವಿಡಿಯೋ ನೋಡಿ ನಕ್ಕ ನೆಟಿಗರು!
ಪಾಕ್ ಕ್ರಿಕೆಟಿಗನೋರ್ವ 1 ರನ್ ಸಿಡಿಸಿ ಅರ್ಧ ಶತಕ ಸಿಡಿಸಿದ ಸಂಭ್ರಮದಲ್ಲಿ ಅದೇ ಎಸೆತದಲ್ಲಿ ಮತ್ತೊಂದು ರನ್ ಪಡೆಯುವ ಭರದಲ್ಲಿ ರನೌಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕ್ ಕ್ರಿಕೆಟಿಗನೋರ್ವ 1 ರನ್ ಸಿಡಿಸಿ ಅರ್ಧ ಶತಕ ಸಿಡಿಸಿದ ಸಂಭ್ರಮದಲ್ಲಿ ಅದೇ ಎಸೆತದಲ್ಲಿ ಮತ್ತೊಂದು ರನ್ ಪಡೆಯುವ ಭರದಲ್ಲಿ ರನೌಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಮನುಕಾ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಕ್ರಿಕೆಟಿಗ ಬಾಬರ್ ಅಜಂ 49 ರನ್ ಪೇರಿಸಿ ಅರ್ಧ ಶತಕ ಹೊಸ್ತಿಲಲ್ಲಿದ್ದರು. ಈ ವೇಳೆ ಆಸ್ಚೋನ್ ಅಗರ್ ಬೌಲಿಂಗ್ ನಲ್ಲಿ ಕೊನೆಯ ಎಸೆತದಲ್ಲಿ 1 ರನ್ ಬಾರಿಸಿದರು. ನಂತರ ಫೀಲ್ಡರ್ ದೂರವಿದ್ದಾರೆ ಎಂದು ತಿಳಿದು ಮತ್ತೊಂದು ರನ್ ಪಡೆಯುವ ಆತುರದಲ್ಲಿ ರನೌಟ್ ಆಗಿದ್ದಾರೆ.
ಈ ಪಂದ್ಯದಲ್ಲಿ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 150 ರನ್ ಪೇರಿಸಿದ್ದು ಆಸ್ಟ್ರೇಲಿಯಾ 18.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


