ಕ್ರಿಕೆಟ್

ಶತಮಾನದ ಸ್ಟನ್ನಿಂಗ್ ಕ್ಯಾಚ್: ಜಿಗಿದು ಒಂದೇ ಕೈಯಲ್ಲಿ ಟೀಂ ಇಂಡಿಯಾ ಆಟಗಾರ್ತಿಯ ಕ್ಯಾಚ್, ವಿಡಿಯೋ ವೈರಲ್!

ಕೆಟ್ ಲೋಕದಲ್ಲಿ ಹಲವು ಅದ್ಭುತ ಕ್ಯಾಚ್ ಗಳು ದಾಖಲಾಗಿವೆ. ಆದರೆ ಇದು ಶತಮಾನದ ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಕ್ಯಾಚ್ ಆಗಿದ್ದು ಟೀಂ ಇಂಡಿಯಾ ಆಟಗಾರ್ತಿಯಾ ಈ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ.

ಶತಮಾನದ ಸ್ಟನ್ನಿಂಗ್ ಕ್ಯಾಚ್: ಜಿಗಿದು ಒಂದೇ ಕೈಯಲ್ಲಿ ಟೀಂ ಇಂಡಿಯಾ ಆಟಗಾರ್ತಿಯ ಕ್ಯಾಚ್, ವಿಡಿಯೋ ವೈರಲ್!
ಹರ್ಮನ್ ಪ್ರೀತ್ ಕೌರ್
Published On :

ಆಂಟಿಗುವಾ: ಕ್ರಿಕೆಟ್ ಲೋಕದಲ್ಲಿ ಹಲವು ಅದ್ಭುತ ಕ್ಯಾಚ್ ಗಳು ದಾಖಲಾಗಿವೆ. ಆದರೆ ಇದು ಶತಮಾನದ ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಕ್ಯಾಚ್ ಆಗಿದ್ದು ಟೀಂ ಇಂಡಿಯಾ ಆಟಗಾರ್ತಿಯಾ ಈ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. 

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತ್ತು. ಇದೇ ಪಂದ್ಯದ ಕೊನೆಯ ಓವರ್ ನ ಕೊನೆಯ ಎಸೆತವನ್ನು ಸ್ಟೆಫಾನಿ ಟೇಲರ್ ಬಿರುಸಾಗಿ ಹೊಡೆದರು. 

ಇನ್ನೇನ್ನು ಚೆಂಡು ಸಿಕ್ಸರ್ ಗೆ ದಾಟಬೇಕಿತ್ತು. ಅಷ್ಟರಲ್ಲಿ ಓಡಿ ಬಂದು ಜಿಗಿದು ಹರ್ಮನ್ ಪ್ರೀತ್ ಕೌರ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. 

ಎಷ್ಟೇ ಪ್ರಯತ್ನ ಪಟ್ಟರು ಈ ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 1 ರನ್ ನಿಂದ ರೋಚಕ ಸೋಲು ಕಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.