ಕ್ರಿಕೆಟ್ ಶ್ರೀಮಂತ ಕ್ರೀಡೆ ಅನ್ನೋದು ಇದಕ್ಕೆ; 1 ಸೆಕೆಂಡ್ ಜಾಹಿರಾತಿಗೆ 2 ಲಕ್ಷ ರೂ.!
ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಿದೆ. ಅಂತೆ ಪಂದ್ಯದ ಪ್ರತಿಯೊಂದು ಸೆಕೆಂಡ್ ಸಹ ಲಕ್ಷಗಟ್ಟಲೆ ಬೆಲೆ ಬಾಳುತ್ತದೆ. ಹೌದು, 1 ಸೆಕೆಂಡ್ ಜಾಹಿರಾತು ದರ ಬರೋಬ್ಬರಿ 2 ಲಕ್ಷ ರುಪಾಯಿ.

Published On :
ನವದೆಹಲಿ: ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಿದೆ. ಅಂತೆ ಪಂದ್ಯದ ಪ್ರತಿಯೊಂದು ಸೆಕೆಂಡ್ ಸಹ ಲಕ್ಷಗಟ್ಟಲೆ ಬೆಲೆ ಬಾಳುತ್ತದೆ. ಹೌದು, 1 ಸೆಕೆಂಡ್ ಜಾಹಿರಾತು ದರ ಬರೋಬ್ಬರಿ 2 ಲಕ್ಷ ರುಪಾಯಿ.
ಸ್ಟಾರ್ ಇಂಡಿಯಾ 8 ವರ್ಷಕ್ಕೆ 12 ಸಾವಿರ ಕೋಟಿ ರುಪಾಯಿ ನೀಡಿ ಸ್ಯಾಟ್ ಲೈಟ್ ಹಕ್ಕನ್ನು ಪಡೆದಿದೆ. ಇನ್ನು ವಿಶ್ವಕಪ್ ಟೂರ್ನಿ ಮೂಲಕ ಭರ್ಜರಿ ಹಣ ಬಾಚಿಕೊಳ್ಳಲು ಪ್ರತಿ ಸೆಕೆಂಡ್ ಜಾಹಿರಾತಿಗೆ 1.7 ಲಕ್ಷದಿಂದ 2 ಲಕ್ಷ ರೂ. ದರ ನಗದಿ ಪಡಿಸಿದೆ. ಇನ್ನು ಇದು ಟೀಂ ಇಂಡಿಯಾ ಮೇಲೆ ನಡೆಯುವ ಪಂದ್ಯಗಳಿಗೆ ಮಾತ್ರ ಈ ದರ.
ಓವರ್ ಮುಕ್ತಾಯದ ಜಾಹಿರಾತು ಪ್ರಸಾರ ಮಾಡಲಾಗುತ್ತದೆ. ರನ್ ಆಫ್ ಶೆಡ್ಯೂಲ್(ಆರ್ಒಎಸ್) ವೇಳೆ 10 ಸೆಕೆಂಡ್ ಜಾಹಿರಾತಿಗೆ 17 ಲಕ್ಷದಿಂದ 20 ಲಕ್ಷದವರೆಗೂ ದರ ವಿಧಿಸಲಾಗಿದೆ. ಟೀಂ ಇಂಡಿಯಾ ಹೊರತುಪಡಿಸಿ ಇನ್ನಿತರ ಪಂದ್ಯಗಳಿಗೆ 6 ಲಕ್ಷದಿಂದ 7 ಲಕ್ಷದವರೆಗೆ ಸ್ಲಾಟ್ ದರವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaadvertisementಜಾಹಿರಾತುStar Indiaಸ್ಟಾರ್ ಇಂಡಿಯಾWorld Cup 2019ವಿಶ್ವಕಪ್ 2019
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


