ಕ್ರಿಕೆಟ್

ಅಭ್ಯಾಸ ಪಂದ್ಯದಲ್ಲಿ ರಾಹುಲ್, ಧೋನಿ ಶತಕದ ಅಬ್ಬರ: ಭಾರತಕ್ಕೆ ಮೊದಲ ಗೆಲುವಿನ ಸಿಹಿ

ಕೆಎಲ್ ರಾಹುಲ್(108) ಹಾಗೂ ಮಹೇಂದ್ರ ಸಿಂಗ್ ಧೋನಿ(113) ಅವರ ಅದ್ಭುತ ಶತಕಗಳು ಹಾಗೂ ಸ್ಪಿನ್ನರ್ ಗಳು ತೋರಿದ ಸಮಯೋಜಿತ ಬೌಲಿಂಗ್ ನೆರವಿನಿಂದ...

ಅಭ್ಯಾಸ ಪಂದ್ಯದಲ್ಲಿ ರಾಹುಲ್, ಧೋನಿ ಶತಕದ ಅಬ್ಬರ: ಭಾರತಕ್ಕೆ ಮೊದಲ ಗೆಲುವಿನ ಸಿಹಿ
ಕೆಎಲ್ ರಾಹುಲ್ ಹಾಗೂ ಮಹೇಂದ್ರ ಸಿಂಗ್ ಧೋನಿ
Published On :
ಕಾರ್ಡಿಫ್: ಕೆಎಲ್ ರಾಹುಲ್(108) ಹಾಗೂ ಮಹೇಂದ್ರ ಸಿಂಗ್ ಧೋನಿ(113) ಅವರ ಅದ್ಭುತ ಶತಕಗಳು ಹಾಗೂ ಸ್ಪಿನ್ನರ್ ಗಳು ತೋರಿದ ಸಮಯೋಜಿತ ಬೌಲಿಂಗ್ ನೆರವಿನಿಂದ ಭಾರತ ವಿಶ್ವಕಪ್ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 95 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಇಲ್ಲಿನ ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 359 ರನ್ ದಾಖಲಿಸಿ ಬಾಂಗ್ಲಾದೇಶ ಗೆಲ್ಲಲು 360 ರನ್ ಗಳ ಕಠಿಣ ಸವಾಲು ನೀಡಿತು.
ಭಾರತದ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ 49.3 ಓವರ್ ಗಳಲ್ಲಿ 264 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು. 
ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದ ಸೋಲಿನ ಹೊರತಾಗಿಯೂ ಬಾಂಗ್ಲಾ ವಿರುದ್ಧ ಅಧಿಕಾರಯುತ ಗೆಲುವಿನ ಮೂಲಕ ವಿಶ್ವಕಪ್‌ಗೆ ಭಾರತ ಶ್ರೇಷ್ಠ ಪೂರ್ವ ತಯಾರಿಯನ್ನೇ ನಡೆಸಿದೆ. ಆದರೂ ನೈಜ ಪಂದ್ಯಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.