ಎಂಎಸ್ ಧೋನಿ ಇದ್ದರೆ 2023ರ ವಿಶ್ವಕಪ್‌ಗೆ ನಾನು ಕಮ್ ಬ್ಯಾಕ್ ಮಾಡುತ್ತೇನೆ: ಡಿವಿಲಿಯರ್ಸ್
ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

Published On :
ಬೆಂಗಳೂರು: ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿವೃತ್ತಿ ಘೋಷಣೆ ವೇಳೆ ನನಗೆ 2019ರ ವಿಶ್ವಕಪ್ ಆಡುವ ಆಸೆ ಇತ್ತು. ಆದರೆ 2023ರ ವಿಶ್ವಕಪ್‌ಗೆ ಬೇಕಾದರೆ ಕಮ್ ಬ್ಯಾಕ್ ಮಾಡುತ್ತೇನೆ. ಆದರೆ ಈ ವೇಳೆ ಧೋನಿ ಕೂಡ ಇರಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಎಷ್ಟು ಪ್ರೇರಣೆ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಿವೃತ್ತಿ ವೇಳೆ ಹಲವರ ಟೀಕೆಗಳನ್ನು ನಾನು ಎದುರಿಸಿದ್ದೇ. ಆಗ ನನಗೆ ಬಹಳ ಕಷ್ಟವೆನಿಸಿತ್ತು. ಆದರೆ ಈ ವಯಸ್ಸಿನಲ್ಲೂ ಧೋನಿ ಆಟ ಉತ್ತಮವಾಗಿದೆ. ಧೋನಿ 2023ರವರೆಗೆ ಇದ್ದರೆ ನಾನು ವಿಶ್ವಕಪ್‌ಗೆ ಬರುತ್ತೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಡಿವಿಲಿಯರ್ಸ್ ಆಫ್ರಿಕಾ ಪರ 114 ಟೆಸ್ಟ್ ಪಂದ್ಯ ಆಡಿದ್ದು 8,765 ರನ್ ಬಾರಿಸಿದ್ದಾರೆ. 22 ಶತಕ, 46 ಅರ್ಧ ಶತಕ ಸಿಡಿಸಿದ್ದಾರೆ. 228 ಏಕದಿನ ಪಂದ್ಯಗಳ ಪೈಕಿ 9,577 ರನ್ ಗಳಿಸಿದ್ದಾರೆ. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaMS Dhoniಎಂಎಸ್ ಧೋನಿAB de Villiersಎಬಿ ಡಿವಿಲಿಯರ್ಸ್2023 World Cup2023 ವಿಶ್ವಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


