ದುಡ್ಡಿಗಾಗಿ ಏನ್ ಬೇಕಾದರೂ ಮಾಡ್ತಾರೆ? ಕೊಹ್ಲಿ ವಿರುದ್ಧ ಆಸೀಸ್ ಕ್ರಿಕೆಟಿಗ ಟ್ವೀಟ್, ಬ್ರಾಡ್ ಬೆವರಿಳಿಸಿದ ಫ್ಯಾನ್ಸ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಯದ ಜಾಹಿರಾತು ಕುರಿತಂತೆ ಆಸೀಸ್ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಟ್ವೀಟ್ ಒಂದನ್ನು ಮಾಡಿದ್ದು ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Published On :
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಯದ ಜಾಹಿರಾತು ಕುರಿತಂತೆ ಆಸೀಸ್ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಟ್ವೀಟ್ ಒಂದನ್ನು ಮಾಡಿದ್ದು ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಿಮಾಲಯ ಕಂಪನಿಗೆ ವಿರಾಟ್ ಕೊಹ್ಲಿ ಮತ್ತು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ರಾಯಭಾರಿಯಾಗಿ ಆಯ್ಕೆಯಾಗಿದ್ದು ಈ ಕಂಪನಿಯ ಉತ್ಪನ್ನ ಪುರುಷರ ಫೇಸ್ ಕ್ರೀಮ್ ಪ್ರಚಾರ ಮಾಡುವ ಜಾಹಿರಾತಿನಲ್ಲಿ ಅಭಿನಯಿಸಿದ್ದಾರೆ. ಈ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ಕುರಿತಂತೆ ಬ್ರಾಡ್ ಹಾಡ್ಜ್ ಅದ್ಭುತವಾಗಿದೆ, ಜನ ದುಡ್ಡಿಗಾಗಿ ಏನ್ ಬೇಕಾದರೂ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದರು. ಇದನ್ನು ನೋಡಿದ ಕೊಹ್ಲಿ ಅಭಿಮಾನಿಗಳು ಬ್ರಾಡ್ ಗೆ ಕಮೆಂಟ್ ಗಳ ಮೂಲಕ ತಿವಿದಿದ್ದಾರೆ.
ಕೊಹ್ಲಿ ಅಭಿಮಾನಿಗಳ ಆಕ್ರೋಶ ಕಂಡು ದಂಗಾದ ಬ್ರಾಡ್ ಕೂಡಲೇ ಮತ್ತೊಂದು ಟ್ವೀಟ್ ಮಾಡಿ ನಾನು ತಮಾಷೆಗೆ ಈ ರೀತಿ ಹೇಳಿದ್ದು ಅದರಲ್ಲಿ ಏನ್ ತಪ್ಪಿದೆ. ನಾನು ಕೂಡ ಕ್ರಿಕೆಟಿಗ ನಾನು ಈ ತರಹದ ಕೆಲಸವನ್ನು ಮಾಡುತ್ತೇನೆ ಎಂದು ಟ್ವೀಟ್ ಮಾಡಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirat Kohliವಿರಾಟ್ ಕೊಹ್ಲಿBrad Hodgeಬ್ರಾಡ್ ಹಾಡ್ಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


