ಕ್ರಿಕೆಟ್

ಬಿದ್ದಾಗ ಆಳಿಗೊಂದು ಕಲ್ಲು: ಧೋನಿ ಸಲಹೆಗಳು ಹಲವು ಬಾರಿ ವರ್ಕೌಟ್ ಆಗಿಲ್ಲ: ಕುಲದೀಪ್ ಯಾದವ್

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಚಾಣಾಕ್ಷ ಹಾಗೂ ಯಶಸ್ವಿ ನಾಯಕನಾಗಿರಬಹುದು. ಒತ್ತಡದ ಸಂದರ್ಭವನ್ನು ನಿಭಾಯಿಸುವಲ್ಲಿ ನಿಸ್ಸೀಮರಿರಬಹುದು.

ಬಿದ್ದಾಗ ಆಳಿಗೊಂದು ಕಲ್ಲು: ಧೋನಿ ಸಲಹೆಗಳು ಹಲವು ಬಾರಿ ವರ್ಕೌಟ್ ಆಗಿಲ್ಲ: ಕುಲದೀಪ್ ಯಾದವ್
ಎಂಎಸ್ ಧೋನಿ, ಕುಲದೀಪ್ ಯಾದವ್
Published On :
ಹೈದರಾಬಾದ್: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಚಾಣಾಕ್ಷ ಹಾಗೂ ಯಶಸ್ವಿ ನಾಯಕನಾಗಿರಬಹುದು. ಒತ್ತಡದ ಸಂದರ್ಭವನ್ನು ನಿಭಾಯಿಸುವಲ್ಲಿ ನಿಸ್ಸೀಮರಿರಬಹುದು. ಆದರೆ ಅವರ ಸಲಹೆಗಳು ಹಲವು ಬಾರಿ ಕೈಕೊಟ್ಟಿದೆ ಎಂದು ಯುವ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.
ಪಂದ್ಯ ನಡೆಯುವ ಸಮಯದಲ್ಲಿ ಎಂಎಸ್ ಧೋನಿ ಹೆಚ್ಚೇನು ಮಾಡನಾಡುವುದಿಲ್ಲ. ಸೂಕ್ತ ಸಲಹೆ ನೀಡಬೇಕೆಂದರೆ ಮಾತ್ರ ಮಾತನಾಡುತ್ತಾರೆ. ಆದರೆ ಧೋನಿ ಸಲಹೆ ಕೈಕೊಟ್ಟಾಗ ಅದನ್ನು ಅವರ ಬಳಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ಕುಲದೀಪ್ ಹೇಳಿದ್ದಾರೆ.
2011ರ ವಿಶ್ವಕಪ್ ಹಾಗೂ 2007ರ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಧೋನಿಯ ಟಿಪ್ಸ್ ಗಳು ಅದೆಷ್ಟೋ ಬಾರಿ ವರ್ಕೌಟ್ ಆಗಿಲ್ಲ ಎಂದು ಕುಲದೀಪ್ ಯಾದವ್ ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ರೋಚಕ ಸೋಲು ಕಂಡಿತ್ತು. ಇನ್ನು ಚೆನ್ನೈ ತಂಡದ ನಾಯಕ ಎಂಎಸ್ ಧೋನಿಯ ಚಾರ್ಮ್ ಇತ್ತೀಚೆಗೆ ಮಂಕಾಗುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.