ಅಂಪೈರ್ ತೀರ್ಪಿನಿಂದ ಸಹನೆ ಕಳೆದುಕೊಂಡು ಅನುಚಿತ ವರ್ತನೆ; ಕೀರಾನ್ ಪೊಲಾರ್ಡ್‌ಗೆ ಶೇ. 25ರಷ್ಟು ದಂಡ!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ...

Published On :
ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಅಸಮ್ಮತಿ ಸೂಚಿಸಿ ಮೈದಾನದಲ್ಲೇ ಅನುಚಿತವಾಗಿ ವರ್ತಿಸಿದ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರಿಗೆ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ ವಿಧಿಸಲಾಗಿದೆ.
ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದ 12ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಕೇವಲ ಒಂದು ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು. ಕೀರಾನ್ ಪೊಲಾರ್ಡ್(41*) ಮೊದಲ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ತೀರ್ಪುಗಾರ ನಿತಿನ್ ಮೆನನ್ ಅವರ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಡ್ವೇನ್ ಬ್ರಾವೊ ಎಸೆದ ಎಸೆತ ವೈಡ್ ಆಗಿದ್ದರಿಂದ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲಾರ್ಡ್ ಅಂಪೈರ್ ತೀರ್ಪಿಗೆ ಅಸಮಾಧಾನ ಸೂಚಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ವೆಸ್ಟ್ ಇಂಡೀಸ್ ಆಟಗಾರ ಮುಂದಿನ ಎಸೆತದಲ್ಲಿ ವೈಡ್ ಲೈನ್ ಮೇಲೆ ನಿಂತು ಬ್ಯಾಟಿಂಗ್ ಮಾಡಲು ಮುಂದಾದರು. ಈ ವೇಳೆ ಬ್ರಾವೊ ಎಸೆತವನ್ನು ಎದುರಿಸದೇ ಸ್ವತಃ ಅವರೇ ಬಿಟ್ಟರು.
ನಂತರ, ಮೈದಾನದಲ್ಲಿದ್ದ ಇಬ್ಬರೂ ಅಂಪೈರ್‌ಗಳಾದ ಮೆನನ್ ಹಾಗೂ ಇಯಾನ್ ಗೌಲ್ಡ್ ಅವರು ಸಾಮಾನ್ಯವಾಗಿ ವಿಕೆಟ್ ಮುಂದೆ ನಿಂತು ಬ್ಯಾಟಿಂಗ್ ಮಾಡುವಂತೆ ಪೊಲಾರ್ಡ್‌ಗೆ ಸೂಚಿಸಿದರು. ಈ ವೇಳೆ ತೀರ್ಪುಗಾರರು ಹಾಗೂ ವಿಂಡೀಸ್ ಆಟಗಾರನ ನಡುವೆ ವಾದ-ವಿವಾದ ನಡೆಯಿತು.
ಅಂತಿಮವಾಗಿ 7 ವಿಕೆಟ್ ಕಳೆದುಕೊಂಡ 148 ರನ್ ದಾಖಲಿಸಿದ ಮುಂಬೈ ಇಂಡಿಯನ್ಸ್, ಎರಡನೇ ಇನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಕೇವಲ ಒಂದು ರನ್‌ನಿಂದ ಗೆದ್ದು ಮುಂಬೈ ನಾಲ್ಕನೇ ಬಾರಿ ಐಪಿಎಲ್ ಚಾಂಪಿಯನ್ ಆಯಿತು.
ಪಂದ್ಯದ ಬಳಿಕ ಪೊಲಾರ್ಡ್ ಮೇಲೆ ಐಪಿಎಲ್ ದಂಡ ವಿಧಿಸಿತು. ಆದರೆ, ನಿಗದಿತ ಯಾವ ಅಪರಾಧಕ್ಕೆ ಆಲ್‌ರೌಂಡರ್ ಗೆ ದಂಡ ವಿಧಿಸಲಾಗಿದೆ ಎಂಬುದು ಹೇಳಿಕೆಯಲ್ಲಿ ಉಲ್ಲೇಖ ಮಾಡಿಲ್ಲ.
WATCH: What's up with Pollard?
Full video here
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kieron PollardMumbai Indiansಮುಂಬೈ ಇಂಡಿಯನ್ಸ್Cricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019ಕೀರಾನ್ ಪೊಲಾರ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


