ಕ್ರಿಕೆಟ್

ಐಪಿಎಲ್ 2019 ಫೈನಲ್ : ಮೈಕೆಲ್ ವಾಘನ್ ಊಹೆ, ಮಹಾ ಕಾಳಗದಲ್ಲಿ ಗೆಲ್ಲೋರು ಯಾರು?

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 12 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು ಎಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ವಾಘನ್ ಊಹಿಸಿದ್ದಾರೆ.

ಐಪಿಎಲ್ 2019 ಫೈನಲ್ : ಮೈಕೆಲ್ ವಾಘನ್ ಊಹೆ, ಮಹಾ ಕಾಳಗದಲ್ಲಿ ಗೆಲ್ಲೋರು ಯಾರು?
ಸಾಂದರ್ಭಿಕ ಚಿತ್ರ
Published On :

ಹೈದ್ರಾಬಾದ್ : ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 12 ನೇ ಆವೃತ್ತಿಯ  ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು ಎಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ವಾಘನ್  ಊಹಿಸಿದ್ದಾರೆ.

ಈ ಆವೃತ್ತಿಯಲ್ಲಿ ಈಗಾಗಲೇ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿರುವ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಲೀಗ್ ಹಂತದಲ್ಲಿ ಎರಡು ಹಾಗೂ ಕ್ವಾಲಿಫೈಯರ್ ಹಂತದ ಒಂದು ಹಂತದಲ್ಲಿ ಸಿಎಸ್ ಕೆ ಸೋತಿದೆ.2016ರ ಚಾಂಪಿಯನ್ಸ್ ಸನ್ ರೈಸರ್ಸ್ ಹೈದ್ರಾಬಾದ್ ತವರು ನೆಲದಲ್ಲಿ ಸಿಎಸ್ ಕೆ ಗಿಂತಲೂ ಮುಂಬೈ ಇಂಡಿಯನ್ಸ್  ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಸಲಹೆ ನೀಡಿದ್ದಾರೆ.

ಆದಾಗ್ಯೂ, ಸಿಎಸ್ ಕೆ ಕೂಡಾ ಗೆಲುವು ಸಾಧಿಸಬಹುದು ಎಂದು ವೈಕೆಲ್ ವಾಘನ್ ಹೇಳಿದ್ದಾರೆ. ಲಂಡನ್ ನಲ್ಲಿ ನಡೆಯುತ್ತಿರುವ ಪುಟ್ಬಾಲ್ ಪಂದ್ಯಾವಳಿ ಹಾಗೂ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಐಪಿಲ್ ಪಂದ್ಯ ಕುರಿತಂತೆ ಟ್ವೀಟ್ ಮಾಡಿರುವ ಮೈಕೆಲ್ ವಾಘನ್,  ಲಂಡನ್ ಗೆ ಹಾನಿಕಾರಕ ಸಮಯ, ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಗೆಲ್ಲುವಿನ ಚಿಂತೆಯಾಗಿದೆ. ಸಾಕಷ್ಟು ಅಭಿಮಾನಿಗಳು ಗಾಬರಿಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದು ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ ಕೆ ನಡುವಣ ನಾಲ್ಕನೇ ಐಪಿಎಲ್ ಪಂದ್ಯವಾಗಿದ್ದು, ನಾಲ್ಕನೇ ಬಾರಿಗೆ ಐಪಿಎಲ್  ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಉಭಯ ತಂಡಗಳಿಗೂ ಇದೆ. ಹೈದ್ರಾಬಾದ್ ಪಿಚ್  ಸ್ಪಿನ್ನರ್ ಗಿಂತಲೂ ಪಾಸ್ಟ್ ಬೌಲರ್ ಗೆ ಹೆಚ್ಚಿನ ನೆರವು ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.