ಮತ್ತೆ ಮಿಂಚಿದ ಧೋನಿ: ಡೆಲ್ಲಿ ವಿರುದ್ಧ ಚೆನ್ನೈ ಗೆ ಭರ್ಜರಿ 80 ರನ್ ಗಳ ಜಯ
ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ.

Published On :
ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ.
ಮೇ.1 ರಂದು ನಡೆದ ಸಿಎಸ್ ಕೆ-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ ಭರ್ಜರಿ 80 ರನ್ ಗಳ ಜಯ ದಾಖಲಿಸಿದೆ.
ಸ್ಲಾಗ್ ಓವರ್ ಗಳಲ್ಲಿ ಎಂದಿನಂತೆ ಧೋನಿ (22 ಎಸೆತಗಳಲ್ಲಿ 44 ರನ್ ) ಪರಾಕ್ರಮ ಮಿಂಚಿದ್ದು, ತಮ್ಮ ಎಂದಿನ ಶೈಲಿಯಲ್ಲಿ 2 ಸಿಕ್ಸರ್ ದಾಖಲಿಸುವ ಮೂಲಕ ತಾವೊಬ್ಬ ಅದ್ಭುತ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ.
ನಿಗದಿತ 20 ಓವರ್ ಗಳಲ್ಲಿ ಚೆನ್ನೈ ತಂಡ 179 ರನ್ ಗಳನ್ನು ದಾಖಲಿಸಿತ್ತು, 180 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಶಿಖರ್ ಧವನ್ (13 ಎಸೆತಗಳಲ್ಲಿ 19 ರನ್)
ಪೃಥ್ವಿ ಶಾ (5 ಎಸೆತಗಳಲ್ಲಿ 4 ರನ್) ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಿಸಿತ್ತು. ಶ್ರೇಯಸ್ ಅಯ್ಯರ್ (31 ಎಸೆತಗಳಲ್ಲಿ 44 ರನ್ ) ಗಳಿಸಿದ್ದು ಡೆಲ್ಲಿ ಪರ ಗರಿಷ್ಠ ಮೊತ್ತವಾದರೆ ಉಳಿದ ಬ್ಯಾಟ್ಸ್ಮನ್ ಗಳು 2 ಅಂಕಿ ಸ್ಕೋರ್ ನ್ನೂ ದಾಟದೇ ಪೆವಿಲಿಯನ್ ಪರೇಡ್ ನಡೆಸಿದರು.
ಬ್ಯಾಟಿಂಗ್ ವೈಫಲ್ಯದಿಂದಾಗಿ ಡೆಲ್ಲಿ ತಂಡ 16.2 ಓವರ್ ಗಳಿಗೆ 99 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಚೆನ್ನೈ ಎದುರು ಶರಣಾಯಿತು. ಐಪಿಎಲ್ ಪಟ್ಟಿಯಲ್ಲಿ ಈ ಗೆಲುವಿನ ಮೂಲಕ 18 ಪಾಯಿಂಟ್ ಗಳನ್ನು ಚೆನ್ನೈ ಅಗ್ರಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


