ಕ್ರಿಕೆಟ್

ವಾರ್ನರ್ ರಿಂದ ನನ್ನ ಶತಕ ಕೂಡ ವ್ಯರ್ಥವಾಯಿತು, 200 ಅಲ್ಲ, 250 ರನ್ ಕೂಡ ಕಡಿಮೆಯೇ: ಸಂಜು ಸ್ಯಾಮ್ಸನ್

ಡೇವಿಡ್ ವಾರ್ನರ್ ರಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು ಎಂದು ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ವಾರ್ನರ್ ರಿಂದ ನನ್ನ ಶತಕ ಕೂಡ ವ್ಯರ್ಥವಾಯಿತು, 200 ಅಲ್ಲ, 250 ರನ್ ಕೂಡ ಕಡಿಮೆಯೇ: ಸಂಜು ಸ್ಯಾಮ್ಸನ್
ವಾರ್ನರ್ ಮತ್ತು ಸ್ಯಾಮ್ಸನ್
Published On :
ಹೈದರಾಬಾದ್: ಡೇವಿಡ್ ವಾರ್ನರ್ ರಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು ಎಂದು ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ ತಂಡ ಸಂಜು ಸ್ಯಾಮ್ಸನ್ ಅವರ ಶತಕ ನೆರವಿನಿಂದ  ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಅಂತೆಯೇ ಹೈದರಾಬಾದ್ ತಂಡಕ್ಕೆ 199 ರನ್ ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ 19 ಓವರ್ ಗಳಲ್ಲಿಯೇ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ  ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ವಾರ್ನರ್ 69 ರನ್ ಗಳಿಸಿ ತಂಡದ ಗೆಲುವಿನ ಮಹತ್ವದ ಪಾತ್ರವಹಿಸಿದರು. 
ಇನ್ನು ಪಂದ್ಯದ ಬಳಿಕ ವಾರ್ನರ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ  ಸಂಜು ಸ್ಯಾಮ್ಸನ್, ನಿಮ್ಮ ಬ್ಯಾಟಿಂಗ್ ನಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು. ನಿಮ್ಮ ಉತ್ತಮ ಬ್ಯಾಟಿಂಗ್ ನಿಂದಾಗಿ ನಾವು ಪಂದ್ಯ ಕಳೆದುಕೊಳ್ಳುವಂತಾಯಿತು. 200 ರನ್ ಸಾಲುವುದಿಲ್ಲ. ನೀವಿರುವಾಗ 250 ರನ್ ಗಳಿಸಬೇಕಿತ್ತು ಎಂದು ಹೇಳಿದ್ದಾರೆ. ಅಂತೆಯೇ ಡೇವಿಜ್ ವಾರ್ನರ್ ರಿಂದ ಕೆಲ ಬ್ಯಾಟಿಂಗ್ ಟಿಪ್ಸ್ ಕೂಡ ಪಡೆದರು. ಈ ವೇಳೆ ಮಾತನಾಡಿದ ವಾರ್ನರ್ ಟಿ20ಯಲ್ಲಿ ಮೊದಲ ಆರು ಓವರ್ ಗಳು ನಿರ್ಣಾಯಕವಾಗಿರುತ್ತದೆ. ಈ ಓವರ್ ಗಳಲ್ಲಿಯೇ ನಾವು ಅತ್ಯಧಿಕ ರನ್ ಗಳಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.