ಕ್ರಿಕೆಟ್

ವಿಶ್ವಕಪ್ 2019: ಟೀಂ ಇಂಡಿಯಾಗೆ ಸಂಕಷ್ಟ, ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ

ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ.

ವಿಶ್ವಕಪ್ 2019: ಟೀಂ ಇಂಡಿಯಾಗೆ ಸಂಕಷ್ಟ, ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ
ಜಸ್ ಪ್ರೀತ್ ಬುಮ್ರಾ
Published On :
ಮುಂಬೈ: ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ.
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದ ವೇಳೆ ಜಸ್ ಪ್ರೀತ್ ಬುಮ್ರಾ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಮುಂಬೈ ತಂಡದ ಪರ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ಬುಮ್ರಾ ಚೆಂಡನ್ನು ಹಿಡಿಯಲು ಡೈವ್ ಮಾಡಿದ್ದು ಈ ವೇಳೆ ಭುಜದ ಸಮಸ್ಯೆಗೆ ಒಳಗಾದಿದ್ದಾರೆ.
ಭುಜದ ಸಮಸ್ಯೆಗೆ ತುತ್ತಾಗುತ್ತಿದ್ದಂತೆ ಮುಂಬೈ ತಂಡದ ವೈದ್ಯರು ಮೈದಾನಕ್ಕೆ ಬಂದು ಬುಮ್ರಾಗೆ ತುರ್ತು ಚಿಕಿತ್ಸೆ ನೀಡಿದರು. ಇನ್ನು ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಆಗಿರುವ ಬುಮ್ರಾ ಅವರು ಗಾಯದ ಸಮಸ್ಯೆಗೆ ಗುರಿಯಾಗಿರುವುದು ಸದ್ಯ ಬಿಸಿಸಿಐ ಚಿಂತೆಗೀಡಾಗುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.