ಕ್ರಿಕೆಟ್

ಐಪಿಎಲ್ ಇತಿಹಾಸದಲ್ಲೇ ಈ ದಾಖಲೆ ಬರೆದ ಮೊದಲ ಆಟಗಾರ ಸುರೇಶ್ ರೈನಾ!

ತೀವ್ರ ನಿರೀಕ್ಷೆ ಕೆರಳಿಸಿದ್ದ ಐಪಿಎಲ್ 2019 ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಸುರೇಶ್ ರೈನಾ ಮುಖಾಂತರ ದಾಖಲೆಯೊಂದು ನಿರ್ಮಾಣವಾಗಿದೆ.

ಐಪಿಎಲ್ ಇತಿಹಾಸದಲ್ಲೇ ಈ ದಾಖಲೆ ಬರೆದ ಮೊದಲ ಆಟಗಾರ ಸುರೇಶ್ ರೈನಾ!
ಸುರೇಶ್ ರೈನಾ
Published On :
ಚೆನ್ನೈ: ತೀವ್ರ ನಿರೀಕ್ಷೆ ಕೆರಳಿಸಿದ್ದ ಐಪಿಎಲ್ 2019 ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಸುರೇಶ್ ರೈನಾ ಮುಖಾಂತರ ದಾಖಲೆಯೊಂದು ನಿರ್ಮಾಣವಾಗಿದೆ.
ಹೌದು.. ಐಪಿಎಲ್ ಇತಿಹಾಸದಲ್ಲೇ ಬ್ಯಾಟ್ಸಮನ್ ಓರ್ವ ಐದು ಸಾವಿರ ರನ್ ಗಳಿಸಿದ ಕೀರ್ತಿಗೆ ಸುರೇಶ್ ರೈನಾ ಪಾತ್ರರಾಗಿದ್ದಾರೆ. ನಿನ್ನೆ ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ನಡೆದ ಉದ್ಘಾಟನಾ ಪಂದ್ಯದಲ್ಲಿ 21 ಎಸೆತದಲ್ಲಿ 19 ರನ್ ಗಳಿಸಿದರು. ಈ ಮೂಲಕ ಐಪಿಎಲ್ ನಲ್ಲಿ ತಮ್ಮ ರನ್ ಗಳಿಕೆಯನ್ನು ರೈನಾ 5 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಉದ್ಘಾಟನಾ ಪಂದ್ಯ ಸೇರಿ ಒಟ್ಟು 173 ಇನ್ನಿಂಗ್ಸ್‌ ಗಳಲ್ಲಿ ರೈನಾ 5,004 ರನ್ ಗಳಿಕೆ ಸಾಧನೆ ಮಾಡಿದ್ದಾರೆ. 
ಇನ್ನು ನಿನ್ನೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಚೆನ್ನೈ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.