ಕ್ರಿಕೆಟ್

ನ್ಯೂಜಿಲೆಂಡ್ ಶೂಟಿಂಗ್: ಕಿವೀಸ್-ಬಾಂಗ್ಲಾದೇಶ ಟೆಸ್ಟ್ ಪಂದ್ಯ ರದ್ದು!

ನ್ಯೂಜಿಲೆಂಡ್ ನ ಹಗ್ಲೆಯಲ್ಲಿ ನಡೆದ ಉಗ್ರನೋರ್ವ ಶೂಟಿಂಗ್ ಪ್ರಕರಣದ ಬೆನ್ನಲ್ಲೇ ನಾಳೆ ಅತಿಥೇಯ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ನ್ಯೂಜಿಲೆಂಡ್ ಶೂಟಿಂಗ್: ಕಿವೀಸ್-ಬಾಂಗ್ಲಾದೇಶ ಟೆಸ್ಟ್ ಪಂದ್ಯ ರದ್ದು!
ಸಂಗ್ರಹ ಚಿತ್ರ
Published On :

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಹಗ್ಲೆಯಲ್ಲಿ ನಡೆದ ಉಗ್ರನೋರ್ವ ಶೂಟಿಂಗ್ ಪ್ರಕರಣದ ಬೆನ್ನಲ್ಲೇ ನಾಳೆ ಅತಿಥೇಯ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಹ್ಯಾಗ್ಲೆ ಪಾರ್ಕ್​ ಸಮೀಪ ಮಸೀದಿಯಲ್ಲಿ ಶೂಟೌಟ್ ನಡೆದಿದ್ದು, ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಸೀದಿ ಸಮೀಪ 6 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಸೀದಿ ಸಮೀಪ ನಾಲ್ಕೈದು ಹೆಣಗಳು ಕಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಇದೊಂದು ಭಯೋತ್ಪಾದನಾ ದಾಳಿ ಎನ್ನಲಾಗಿದೆ. ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. 

ಇನ್ನು ಹ್ಯಾಗ್ಲೆ ಪಾರ್ಕ್​ ಸಮೀಪ ಮಸೀದಿಯಲ್ಲಿ ಶೂಟೌಟ್ ನಡೆದಿದ್ದು, ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದ. ಮೂಲಗಳ ಪ್ರಕಾರ ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ಹ್ಯಾಗ್ಲೆ ಪಾರ್ಕ್​ ಸಮೀಪ ಇದ್ದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್​ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಾಂಗ್ಲಾ ಕ್ರಿಕೆಟ್​ ತಂಡ ಕೂದಲೆಳೆಯಲ್ಲಿ ಬಚಾವ್​ ಆಗಿ ಪ್ರಾಣ ಉಳಿಸಿಕೊಂಡಿದೆ. ದೇವರು ನಮ್ಮನ್ನು ರಕ್ಷಿಸಿದ್ದಾರೆ ಎಂದು ಆಟಗಾರರು ಟ್ವೀಟ್​ ಮಾಡಿಕೊಂಡಿದ್ದಾರೆ.

ಇನ್ನು ಕ್ರಿಕೆಟಿಗರ ಮೇಲಿನ ದಾಳಿ ಹಿನ್ನಲೆಯಲ್ಲಿ ನಾಳೆ ಹ್ಯಾಗ್ಲೆಯಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶದ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ನಾಳೆಯಿಂದ ಕ್ರೈಸ್ಟ್ ಚರ್ಚ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದರೆ ಶಂಕಿತ ಉಗ್ರ ದಾಳಿಯಿಂದಾಗಿ ನಾಳಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.