ವಿಶ್ವಕಪ್ ಕ್ರಿಕೆಟ್ : ಧೋನಿ ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ- ಶೇನ್ ವಾರ್ನ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೊಗಸಾದ ನಾಯಕ ಎಂದು ಕರೆದಿರುವ ಶೇನ್ ವಾರ್ನ್ ಎಂ.ಎಸ್. ಧೋನಿಯನ್ನು ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ ಎಂದಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೊಗಸಾದ ನಾಯಕ ಎಂದು ಕರೆದಿರುವ ಶೇನ್ ವಾರ್ನ್ ಎಂ.ಎಸ್. ಧೋನಿಯನ್ನು ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ ಎಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅಂತಹ ಅನುಭವಿ ಆಟಗಾರ ಟೀಂ ಇಂಡಿಯಾದಲ್ಲಿ ಇರಲೇಬೇಕಾಗುತ್ತದೆ. ನನ್ನಗಾಗಿ ಧೋನಿ ಅತ್ಯುತ್ತಮ ಆಟಗಾರರಾಗಿದ್ದು, ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಧೋನಿ ಅವರ ಅನುಭವವನ್ನು ಶೇನ್ ವಾರ್ನ್ ಹೊಗಳಿದ್ದು, ವಿಶ್ವಕಪ್ ನಲ್ಲಿ ಧೋನಿ ಅವರ ಅನುಭವ ಹಾಗೂ ನಾಯಕತ್ವದ ಗುಣಗಳು ವಿರಾಟ್ ಕೊಹ್ಲಿ ಅವರ ನಾಯಕತ್ವಕ್ಕೆ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ನಲ್ಲಿ ಇಂಡಿಯಾ ಹಾಗೂ ಇಂಗ್ಲೆಂಡ್ ಗೆಲ್ಲುವ ಫೆವರಿಟ್ ತಂಡಗಳಾಗಿವೆ ಏಕೆಂದರೆ ಕಳೆದ ಆರರಿಂದ 12 ತಿಂಗಳಿಂದ ಅವರು ಆಡುತ್ತಲೇ ಇದ್ದಾರೆ. ಆದರೆ, ಆಸ್ಟ್ರೇಲಿಯಾ ಕೂಡಾ ಆ ನಂಬಿಕೆಯನ್ನು ಈಗ ಹೆಚ್ಚಿಸಿಕೊಂಡಿದೆ. ಅವರು ಕೂಡಾ ಗೆಲ್ಲಬಹುದು ಎಂದು ಶೇನ್ ವಾರ್ನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


