ಕುಲದೀಪ್ ಯಾದವ್ ಟೀಂ ಇಂಡಿಯಾದ ಶೇನ್ ವಾರ್ನ್: ಮ್ಯಾಥ್ಯೂವ್ ಹೇಡನ್
ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ಟೀಂ ಇಂಡಿಯಾದ ಶೇನ್ ವಾರ್ನ್ ಎಂದು ಮಾಜಿ ಕ್ರಿಕೆಟಿಗ ಮ್ಯಾಥ್ಯೂವ್ ಹೇಡನ್ ಹೇಳಿದ್ದಾರೆ.

Published On :
ನವದೆಹಲಿ: ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ಟೀಂ ಇಂಡಿಯಾದ ಶೇನ್ ವಾರ್ನ್ ಎಂದು ಮಾಜಿ ಕ್ರಿಕೆಟಿಗ ಮ್ಯಾಥ್ಯೂವ್ ಹೇಡನ್ ಹೇಳಿದ್ದಾರೆ.
ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಕುಲದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಒಂದು ಅರ್ಥದಲ್ಲಿ ಹೇಳುವುದಾದರೆ ಆಸ್ಟ್ರೇಲಿಯಾದಲ್ಲಿ ಶೇನ್ ವಾರ್ನ್ ಯಾವ ರೀತಿ ಆಡುತ್ತಿದ್ದರೋ ಅದೇ ರೀತಿ ಕುಲದೀಪ್ ಟೀಂ ಇಂಡಿಯಾ ಪರ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಕುಲದೀಪ್ ಬೌಲಿಂಗ್ ನಲ್ಲಿ ಚೆಂಡೂ ಪರಿಣಾಮಕಾರಿಯಾಗಿ ಸ್ಪಿನ್ ಆಗುವುದರಿಂದ ಬ್ಯಾಟ್ಸ್ ಮನ್ ಗಳು ಗೊಂದಲಕ್ಕೀಡಾಗುತ್ತಾರೆ. ಇನ್ನು ಶಾಟ್ ಹೊಡೆಯಲು ಮುಂದಾದಾಗ ಔಟ್ ಆಗುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಹೇಡನ್ ಹೇಳಿದ್ದಾರೆ.
42 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಕುಲದೀಪ್ 85 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 18 ಟಿ20 ಪಂದ್ಯಗಳ ಪೈಕಿ 35 ವಿಕೆಟ್ ಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaShane Warneಶೇನ್ ವಾರ್ನ್Kuldeep Yadavಕುಲದೀಪ್ ಯಾದವ್Matthew Haydenಮ್ಯಾಥ್ಯೂವ್ ಹೇಡನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


