ಧೋನಿ ಅದ್ಭುತ ಕ್ಯಾಚ್: ಪಾಕ್ ನಾಯಕ ಸರ್ಫರಾಜ್ ಟ್ರೋಲ್, ಯಾವುದು ಅಮೋಘ ಕ್ಯಾಚ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದಾರೆ.

Published On :
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದಾರೆ. ಇನ್ನು ಎಂಎಸ್ ಧೋನಿ ಕ್ಯಾಚ್ ಕುರಿತಂತೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ರನ್ನು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಬುಮ್ರಾರ ಮೊದಲ ಎಸೆತದಲ್ಲೇ ಬ್ರಾಥ್ ವೈಟ್ ಬ್ಯಾಟ್ ಗೆ ಚೆಂಡು ತಗುಲಿ ಕೀಪರ್ ನತ್ತ ಸಾಗಿತ್ತು. ಈ ವೇಳೆ ಕೀಪರ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದರು. ಧೋನಿಯ ಈ ಅಮೋಘ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಇನ್ನು ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಅಹ್ಮದ್ ಸಹ ಇದೇ ರೀತಿ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದರು. ಈ ವಿಡಿಯೋ ಹಾಗೂ ಧೋನಿ ಹಿಡಿದ ಕ್ಯಾಚ್ ವಿಡಿಯೋವನ್ನು ಐಸಿಸಿ ತನ್ನ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿತ್ತು. ಈ ವಿಡಿಯೋ ನೋಡಿದ ನೆಟಿಗರು ಸರ್ಫರಾಜ್ ಅಹ್ಮದ್ ನನ್ನು ಟ್ರೋಲ್ ಮಾಡಿದ್ದಾರೆ.
ಧೋನಿ ಕ್ಯಾಚ್ ಹಿಡಿಯುವಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದರು. ಆದರೆ ಸರ್ಫರಾಜ್ ನಿದ್ರೆಯಿಂದ ಕೆಳಗೆ ಬೀಳುವಾಗ ಆಕಸ್ಮಿಕವಾಗಿ ಕ್ಯಾಚ್ ಹಿಡಿದರು ಎಂದು ಕಮೆಂಟ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaPakistanಪಾಕಿಸ್ತಾನMS Dhoniಎಂಎಸ್ ಧೋನಿCricket Offbeatಕ್ರಿಕೆಟ್ ಸ್ವಾರಸ್ಯಸರ್ಫರಾಜ್ ಅಹ್ಮದ್ವಿಶ್ವಕಪ್ 2019Sarfaraz AhmedCWC19
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


