ವಿಶ್ವಕಪ್ 2019: ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಬೌಲರ್ ಗಳ ಅದ್ಬುತ ಪ್ರದರ್ಶನ- ವಿರಾಟ್ ಕೊಹ್ಲಿ
ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಪ್ರದರ್ಶನ ಅದ್ಬುತವಾಗಿತ್ತು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Published On :
ಸೌಂಥೆಪ್ಟನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಪ್ರದರ್ಶನ ಅದ್ಬುತವಾಗಿತ್ತು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಬೂಮ್ರಾ 49 ನೇ ಓವರ್ ಪೂರ್ಣಗೊಳಿಸಿದ ನಂತರ ಕೊನೆಯ ಓವರ್ ನಲ್ಲಿ ಶಮಿ ಹೆಚ್ಚಿನ ರನ್ ಗಳನ್ನು ಕೊಡದಂತೆ ಉತ್ತಮ ಆಟವಾಡಿದ್ದಾರೆ. ಚಾಹೆಲ್ ಕೂಡಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಒಟ್ಟಾರೇ ಎಲ್ಲ ಬೌಲರ್ ಗಳು ಅದ್ಬುತ ಪ್ರದರ್ಶನ ನೀಡಿರುವುದಾಗಿ ಕೊಹ್ಲಿ ಕೊಂಡಾಡಿದರು.
ಅಂದುಕೊಂಡಂತೆ ಪಂದ್ಯ ನಡೆಯುತ್ತಿರಲಿಲ್ಲ. ಆದರೆ, ಕೊನೆಯ ಎಸೆತವರೆಗೂ ಹೋರಾಡುವ ಮೂಲಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಗೆಲುವಿನಿಂದಾಗಿ ಬೃಹತ್ ಪ್ರೀತಿ ಗಳಿಸಿದ್ದು, ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿರುವುದಾಗಿ ಕೊಹ್ಲಿ ಹೇಳಿದರು.
ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ವಿಕೆಟ್ ಗಳ ನೆರವಿನಿಂದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ 11 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketವಿರಾಟ್ ಕೊಹ್ಲಿICC World Cup 2019ಐಸಿಸಿ ವಿಶ್ವಕಪ್ 2019Virat Kohli ಕ್ರಿಕೆಟ್India v/s Afghanistanಭಾರತv/s ಅಫ್ಘಾನಿಸ್ತಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


