'ಸ್ಟಂಪಿಂಗ್ ಸ್ಟಾರ್' ಎಂಎಸ್ ಧೋನಿಯನ್ನೇ ಸ್ಟಂಪ್ ಔಟ್ ಮಾಡಿದ ಆಫ್ಘಾನ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಫ್ಘಾನಿಸ್ತಾನದ ವಿರುದ್ಧ ಸ್ಟಂಪ್ ಔಟ್ ಆಗಿದ್ದಾರೆ. ಜಗತ್ತಿನ ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನೇ...

Published On :
ಸೌತಾಂಪ್ಟನ್(ಲಂಡನ್): ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಫ್ಘಾನಿಸ್ತಾನದ ವಿರುದ್ಧ ಸ್ಟಂಪ್ ಔಟ್ ಆಗಿದ್ದಾರೆ. ಜಗತ್ತಿನ ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನೇ ಸ್ಟಂಪ್ ಔಟ್ ಮಾಡಿದ್ದ ಧೋನಿ ಎಂತಹ ಕಠಿಣ ಸಂದರ್ಭದಲ್ಲೂ ಸ್ಟಂಪ್ ಔಟ್ ಆಗುತ್ತಿರಲಿಲ್ಲ. ಆದರೆ ಆಫ್ಘಾನ್ ವಿರುದ್ಧ ತಾಳ್ಮೆ ಕಳೆದುಕೊಂಡು ಸ್ಟಂಪ್ ಔಟ್ ಆಗಿದ್ದಾರೆ.
ಬರೋಬ್ಬರಿ 8 ವರ್ಷಗಳ ಬಳಿಕ ಧೋನಿ ಸ್ಟಂಪ್ ಔಟ್ ಆಗುತ್ತಿರುವುದು. ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ 44.3ನೇ ಓವರ್ ನಲ್ಲಿ ಸ್ಪಿನ್ನರ್ ರಶೀದ್ ಖಾನ್ ಎಸೆತದಲ್ಲಿ ಸ್ಟಂಪ್ ಔಟ್ ಆದರು.
ಇನ್ನು ಧೋನಿ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸ್ಟಂಪ್ ಔಟ್ ಆಗುತ್ತಿರವುದು ಇದು ಎರಡನೇ ಬಾರಿಗೆ. 2011ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಧೋನಿ ಚೊಚ್ಚಲ ಬಾರಿಗೆ ಸ್ಟಂಪ್ ಔಟ್ ಆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaMS DhoniAfghanistanಎಂಎಸ್ ಧೋನಿಆಫ್ಘಾನ್Cricket Offbeatಕ್ರಿಕೆಟ್ ಸ್ವಾರಸ್ಯ2019 World Cup2019 ವಿಶ್ವಕಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


