ಜನರ ಮುಂದೆ 'ಹಂದಿ' ಎಂದು ಜರಿದ ಪಾಕ್ ಅಭಿಮಾನಿ; ಇದಕ್ಕೆ ಸರ್ಫರಾಜ್ ಮಾಡಿದ್ದೇನು ಗೊತ್ತ? ವಿಡಿಯೋ!
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲಿನ ಬಳಿಕ ಪಾಕ್ ಅಭಿಮಾನಿಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು ಪಾಕ್ ನಾಯಕ ಸರ್ಫರಾಜ್ ಅಹ್ಮದ್ ತಮ್ಮ...

Published On :
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲಿನ ಬಳಿಕ ಪಾಕ್ ಅಭಿಮಾನಿಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು ಪಾಕ್ ನಾಯಕ ಸರ್ಫರಾಜ್ ಅಹ್ಮದ್ ತಮ್ಮ ಪುತ್ರನೊಂದಿಗೆ ಶಾಪಿಂಗ್ ಗೆ ಹೋಗಿದ್ದಾಗ ಪಾಕ್ ಅಭಿಮಾನಿಯೊಬ್ಬ ಹಂದಿ ಎಂದು ಜರಿದ ಘಟನೆ ನಡೆದಿದೆ.
ಸರ್ಫರಾಜ್ ಮಾಲ್ ನಲ್ಲಿ ಶಾಪಿಂಗ್ ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಸರ್ಫರಾಜ್ ರನ್ನು ಕೇಳಿಕೊಳ್ಳುತ್ತಾನೆ. ಜೊತೆಯಲ್ಲಿ ಪುತ್ರನಿದ್ದ ಕಾರಣ ಸರ್ಫರಾಜ್ ಸೆಲ್ಫಿಗೆ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಅಭಿಮಾನಿ ಸರ್ಫರಾಜ್ ರನ್ನು ನಿಂದಿಸಲು ಪ್ರಾರಂಭಿಸುತ್ತಾನೆ.
ನೀವು ಯಾಕೆ ಹಂದಿಯಂತೆ ದಪ್ಪಗಿದ್ದೀರಾ ಎಂದು ಸಾರ್ವಜನಿಕರ ಸಮ್ಮುಖದಲ್ಲೇ ಸರ್ಫರಾಜ್ ರನ್ನು ನಿಂದಿಸುತ್ತಾನೆ. ಈ ವೇಳೆ ಸರ್ಫರಾಜ್ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ತೆರಳಿದರು.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಫರಾಜ್ ಪರ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು ಅಭಿಮಾನಿಯ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
A shameful act by a Pakistani fan with captain Sarfaraz Ahmed, this is how we treat our National Heros. Highly condemnable!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಅಭಿಮಾನಿfansCricket Offbeatಕ್ರಿಕೆಟ್ ಸ್ವಾರಸ್ಯWorld Cup 2019ಸರ್ಫರಾಜ್ ಅಹ್ಮದ್ವಿಶ್ವಕಪ್ 2019Sarfaraz Ahmed
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


