ಕ್ರಿಕೆಟ್

ಐಸಿಸಿ ವಿಶ್ವಕಪ್ ಕ್ರಿಕೆಟ್ :ಶಿಸ್ತುಬದ್ಧ ಆಟದಿಂದ ಭಾರತವನ್ನು 224ಕ್ಕೆ ಕಟ್ಟಿಹಾಕಿದ ಅಫ್ಘಾನಿಸ್ತಾನ

ಇಂದು ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಶಿಸ್ತುಬದ್ಧ ಆಟ ಪ್ರದರ್ಶಿಸಿದ ಅಫ್ಘಾನಿಸ್ತಾನ ಕೊಹ್ಲಿ ಪಡೆಯನ್ನು 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ :ಶಿಸ್ತುಬದ್ಧ ಆಟದಿಂದ  ಭಾರತವನ್ನು 224ಕ್ಕೆ ಕಟ್ಟಿಹಾಕಿದ ಅಫ್ಘಾನಿಸ್ತಾನ
ವಿರಾಟ್ ಕೊಹ್ಲಿ
Published On :
ಸೌಥಂಪ್ಟನ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಇಂದು ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಶಿಸ್ತುಬದ್ಧ  ಆಟ ಪ್ರದರ್ಶಿಸಿದ ಅಫ್ಘಾನಿಸ್ತಾನ ಕೊಹ್ಲಿ ಪಡೆಯನ್ನು 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀ ಇಂಡಿಯಾ ಪರ ಆರಂಭಿಕ ಆಟಗಾರ ಕೆ ಎಲ್ ರಾಹುಲ್  30 ರನ್ ಗಳಿಸಿ ಮೊಹಮ್ಮದ್ ನಬಿ ಬೌಲಿಂಗ್ ನಲ್ಲಿ ಹಜರತ್ ಜಾಝೈಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರೋಹಿತ್  ಶರ್ಮಾ, ಮುಜಿಬ್ ಉರ್ ರೆಹಮಾನ್  ಬೌಲಿಂಗ್ ನಲ್ಲಿ ಕೇವಲ 1 ರನ್ ಗಳಿಗೆ ಔಟ್ ಆಗುವ ಮೂಲಕ ಆರಂಭಿಕ ಆಘಾತ ನೀಡಿದರು.
 ನಂತರ ಮೂರನೇ ವಿಕೆಟ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಕ್ರಮವಾಗಿ  67 ಹಾಗೂ 29 ರನ್ ಗಳಿಸುವ ಮೂಲಕ  ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೂ ಅಪ್ಘಾನಿಸ್ತಾನದ ಶಿಸ್ತುಬದ್ಧ ಆಟದಿಂದಾಗಿ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ. ಮೊಹಮ್ಮದ್ ನಬಿ ಬೌಲಿಂಗ್ ನಲ್ಲಿ ಕೊಹ್ಲಿ ಔಟಾದರೆ, ವಿಜಯ್ ಶಂಕರ್ ಎಲ್ ಬಿಡಬ್ಲ್ಯೂವಿಗೆ ಬಲಿಯಾದರು. ತದನಂತರ ಬಂದ ಎಂಎಸ್ ಧೋನಿ 28, ಹಾರ್ದಿಕ್ ಪಾಂಡ್ಯ 7 , ಮೊಹಮ್ಮದ್ ಶಮಿ ಕೇವಲ 1 ರನ್ ಗಳಿಗೆ ಔಟಾದರು.
ಅಫ್ಘಾನಿಸ್ತಾನ ಪರ  ಗುಲ್ಬದ್ದೀನ್ ನೈಬ್ ಹಾಗೂ ಮೊಹಮ್ಮದ್ ನಬಿ ತಲಾ 2, ರಶೀದ್ ಖಾನ್, ರೆಹಮತ್ ಶಾ, ಅಫ್ತಬ್ ಅಲಂ, ಮುಜಿಮ್ ಉರ್ ರೆಹಮಾನ್  ತಲಾ 1 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾವನ್ನು 224ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.