ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್, ರೋಹಿತ್ ಶರ್ಮಾ, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!
ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

Published On :
ಲಂಡನ್: ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.
ಹೌದು... ಈ ಹಿಂದೆ ಕೊಹ್ಲಿಯ ವೇಗದ 5 ಸಾವಿರ, 6 ಸಾವಿರ ಮತ್ತು 7 ಸಾವಿರ ರನ್ ಗಳ ದಾಖಲೆ ಹಿಂದೆ ಬಿದಿದ್ದ ಹಶೀಮ್ ಆಮ್ಲಾ ವೇಗದ 8 ಸಾವಿರ ರನ್ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ. ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಮ್ಲಾ55 ರನ್ ಗಳಿಸುವ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ 2ನೇ ವೇಗದ 8 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಆಮ್ಲಾ ತಮ್ಮದೇ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್, ಭಾರತದ ರೋಹಿತ್ ಶರ್ಮಾ ಮತ್ತು ಭಾರತದ ಮಾಜಿ ನಾಯಕ ಲೆಜೆಂಡ್ ಸೌರವ್ ಗಂಗೂಲಿ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
2 ಸಾವಿರ ರನ್ದಿಂದ 7 ಸಾವಿರದವರೆಗೆ ಅತಿ ವೇಗವಾಗಿ ರನ್ ಪೂರೈಕೆ ಮಾಡಿರುವ ಪಟ್ಟಿಯಲ್ಲಿ ಆಮ್ಲಾ ಮೊದಲ ಸ್ಥಾನದಲ್ಲಿದ್ದರು.
ಆಮ್ಲಾ ಒಟ್ಟು 176 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದು, ದಕ್ಷಿಣ ಆಫ್ರಿಕಾ ಪರ ಅತಿ ವೇಗವಾಗಿ 8 ಸಾವಿರ ರನ್ ಪೂರೈಕೆ ಮಾಡಿರುವ ಮೊದಲ ಆಟಗಾರ ಎಂಬ ಕೀರ್ತಿಗೂ ಆಮ್ಲಾ ಭಾಜನರಾಗಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 175 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಆಫ್ರಿಕಾದ ಎಬಿಡಿ ವಿಲಿಯರ್ಸ್ ಈ ದಾಖಲೆಗೆ 182 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಭಾರತದ ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ 200 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್Londonಲಂಡನ್ದಕ್ಷಿಣ ಆಫ್ರಿಕಾSouth AfricaHashim Amlaಹಶೀಮ್ ಆಮ್ಲಾCricket OffbeatICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


