ವಿಶ್ವಕಪ್ 2019: ವಾರ್ನರ್ ಅಬ್ಬರದ ಶತಕ ಅಸೀಸ್ 381/5
ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕದ ನೆರವಿನಿಂದ 5 ವಿಕೆಟ್ ನಷ್ಟದೊಡನೆ 381 ರನ್ ಕಲೆಹಾಕಿದೆ.

Published On :
ನಾಟಿಂಗ್‌ಹ್ಯಾಮ್: ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕದ ನೆರವಿನಿಂದ 5 ವಿಕೆಟ್ ನಷ್ಟದೊಡನೆ 381 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾಗೆ ಮಳೆ ಕಾಟ ಕೊಟ್ಟದ್ದು ಸತ್ಯ. ಮಳೆ ಕಾರಣದಿಂದ ಪಂದ್ಯವನ್ನು 49ಓವರ್ ಗೆ ಸೀಮಿತಗೊಳಿಸಲಾಗಿತ್ತು.
ಆದರೆ ಮಳೆ ಅಡ್ಡಿಯಲ್ಲಿಯೂ ವಾರ್ನರ್ ಶತಕ (166) ನಾಯಕ ಆ್ಯರೋನ್ ಫಿಂಚ್ (53) ಹಾಗೂ ಉಸ್ಮಾನ್ ಖವಾಜ (89) ಅರ್ಧ ಶತಕ ನೆರವಿನೊಡನೆ 5 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿದ್ದು ಬಾಂಗ್ಲಾಗೆ ಗೆಲ್ಲಲು 382 ರನ್ ಗುರಿ ನೀಡಿದೆ.
ಬಾಂಗ್ಲಾ ಪರ ಸೌಮ್ಯಾ ಸರ್ಕಾರ್ 3, ಮುಜಾಫರ್ ರೆಹಮಾನ್ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


