ಪಾಕ್‌ಗೆ ಜೋಕ್ ಕೊಟ್ಟ 'ಡ್ರೀಮ್ ಬಾಲ್' ಬಗ್ಗೆ ಕುಲದೀಪ್ ಹೇಳಿದ್ದೇನು? ವಿಡಿಯೋ!
ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿದ್ದು ಪಾಕ್‌ಗೆ ಕೊನೆಯ ಮೊಳೆ ಹೊಡೆದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಡ್ರೀಮ್ ಬಾಲ್ ಕುರಿತು ಹೇಳಿಕೊಂಡಿದ್ದಾರೆ.

Published On :
ಲಂಡನ್: ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿದ್ದು ಪಾಕ್‌ಗೆ ಕೊನೆಯ ಮೊಳೆ ಹೊಡೆದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಡ್ರೀಮ್ ಬಾಲ್ ಕುರಿತು ಹೇಳಿಕೊಂಡಿದ್ದಾರೆ.
ಕುಲದೀಪ್ ಯಾದವ್ ಎಸೆತವೂ ಸ್ಪಿನ್ ಆಗಿ ವಕ್ರವಾಗಿ ತೇಲಿ ಬಂದು ಪಾಕಿಸ್ತಾನದ ಬಾಬರ್ ಅಜಂ ಅವರನ್ನು ಕಂಗೆಡಿಸಿತ್ತು. ಕುಲದೀಪ್ ಎಸೆತಕ್ಕೆ ಹೇಗೆ ಬ್ಯಾಟ್ಬೀಸುವುದು ಎಂದು ತಿಳಿಯದೇ ತಬ್ಬಿಬ್ಬಾಗಿದ್ದರು. ಆರಂಭದಲ್ಲೇ ಚೆಂಡು ದೂರದಲ್ಲೇ ಬಾಗುತ್ತಾ ಬಂದಿತ್ತು. ಲೈನ್ ಗೆ ಬಂತು ಎನ್ನುವಷ್ಟರಲ್ಲಿ ಚೆಂಡು ದಿಢೀರನೇ ತಿರುಗಿ, ಆಫ್ ಸ್ಟಂಪ್ ಮೇಲೆ ಬಡಿದು ಬೇಲ್ಸ್ ಉರುಳಿಸಿತ್ತು.
ಕುಲದೀಪ್ ಅವರ ಎಸೆತವು 5.8 ಡಿಗ್ರಿ ತಿರುವು ಪಡೆದು ಬಾಬರ್ ವಿಕೆಟ್ ಉರುಳಿಸಿತ್ತು. ಓಲ್ಡ್ ಟ್ರಾಫರ್ಡ್ ಪಿಚ್ ನಲ್ಲಿ ಈ ರೀತಿಯಾಗಿ ಚೆಂಡು ತಿರುವು ಪಡೆಯುತ್ತದೆ ಎಂದು ಬಾಬರ್ ಸಹ ನಿರೀಕ್ಷಿಸಿರಲಿಲ್ಲ. ಅಂತೆ ಬಾಬರ್ ಔಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaKuldeep Yadavಕುಲದೀಪ್ ಯಾದವ್World Cup 2019ವಿಶ್ವಕಪ್ 2019Dream DeliveryBabar Azamಡ್ರೀಮ್ ಚೆಂಡುಬಾಬರ್ ಅಜಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


