ಕ್ರಿಕೆಟ್

ಬದ್ಧ ವೈರಿ ಪಾಕ್ ವಿರುದ್ಧ ದೊಡ್ಡ ಎಡವಟ್ಟು ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎಡವಟ್ಟು ಮಾಡುವುದು ಕಡಿಮೆ. ಆದರೆ ಬದ್ಧ ವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದೊಡ್ಡ ಎಡವಟ್ಟು ಒಂದನ್ನು ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಬದ್ಧ ವೈರಿ ಪಾಕ್ ವಿರುದ್ಧ ದೊಡ್ಡ ಎಡವಟ್ಟು ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!
ಎಂಎಸ್ ಧೋನಿ
Published On :
ಮ್ಯಾಂಚೆಸ್ಟರ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎಡವಟ್ಟು ಮಾಡುವುದು ಕಡಿಮೆ. ಆದರೆ ಬದ್ಧ ವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದೊಡ್ಡ ಎಡವಟ್ಟು ಒಂದನ್ನು ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಅಂಪೈರ್ ಡಿಶಿಷನ್ ರಿವ್ಯೂ ಸಿಸ್ಟಂ ಅಂದರೆ ಧೋನಿ ರಿವ್ಯೂ ಸಿಸ್ಟಂ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಯಾಕೆಂದರೆ ಧೋನಿ ಡಿಆರ್ಎಸ್ ಗೆ ಅಪೀಲ್ ಮಾಡಿದಾಗ ಶೇಕಡಾ 99ರಷ್ಟು ಸಂದರ್ಭದಲ್ಲಿ ಔಟ್ ಆಗಿರುತ್ತದೆ. 
ಆದರೆ ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ಧೋನಿ ರಿವ್ಯೂ ಸಿಸ್ಟಂ ವರ್ಕೌಟ್ ಆಗಲಿಲ್ಲ. ಪರಿಣಾಮ ಬಾಬರ್ ಅಜಾಮ್ ಅವರ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಯುಜುವೇಂದ್ರ ಚಹಾಲ್ ಬೌಲಿಂಗ್ ನಲ್ಲಿ ಬಾಬರ್ ಅಜಾಮ್ ಪ್ಯಾಡ್ ಗೆ ಚೆಂಡು ಬಡಿದು ನಂತರ ಬ್ಯಾಟ್ ಗೆ ತಗುಲಿತ್ತು. ಈ ವೇಳೆ ಅಪೀಲ್ ಮಾಡಿದಾಗ ಅಂಪೈರ್ ಮನವಿಯನ್ನು ಪುರಸ್ಕರಿಸಲಿಲ್ಲ.
ಚಹಾಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಮನವಿ ಮಾಡಲು ನಿಂತಿದ್ದರು. ಆದರೆ ಧೋನಿ ಮಾತ್ರ ಡಿಆರ್ಎಸ್ ಗೆ ಮನವಿ ಮಾಡುವುದು ಬೇಡ ಎಂದು ಸಲಹೆ ನೀಡಿದರು. ಪರಿಣಾಮ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.