ಕ್ರಿಕೆಟ್

ಐಸಿಸಿ ವಿಶ್ವಕಪ್: ಅಫ್ಘಾನ್ ವಿರುದ್ಧ ದ. ಆಫ್ರಿಕಾಗೆ 9 ವಿಕೆಟ್ ಜಯ

ಮಳೆ ಕಾಟದ ಹೊರತಾಗಿಯೂ ಐಸಿಸಿ ವಿಶ್ವಕಪ್ ಸರಣಿಯ ಶನಿವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.

ಐಸಿಸಿ ವಿಶ್ವಕಪ್: ಅಫ್ಘಾನ್ ವಿರುದ್ಧ ದ. ಆಫ್ರಿಕಾಗೆ 9 ವಿಕೆಟ್ ಜಯ
ಐಸಿಸಿ ವಿಶ್ವಕಪ್: ಅಫ್ಘಾನ್ ವಿರುದ್ಧ ದ. ಆಫ್ರಿಕಾಗೆ 9 ವಿಕೆಟ್ ಜಯ
Published On :
ಲಂಡನ್: ಮಳೆ ಕಾಟದ ಹೊರತಾಗಿಯೂ ಐಸಿಸಿ ವಿಶ್ವಕಪ್ ಸರಣಿಯ ಶನಿವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ. 

ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 127 ರನ್ ಗೆಲುವಿನ ಗುರಿ ಪಡೆದಿದ್ದ ದ. ಆಫ್ರಿಕಾ ಹಾಶೀಮ್ ಆಮ್ಲಾ ಹಾಗೂ ಕ್ವಿಂಟನ್ ಡಿ ಕಾಕ್ ಅಹಾಯದಿಂದ ಈ ಜಯ ಗಳಿಸಿದೆ. ಇನ್ನು ಸರಣಿಯಲ್ಲಿ ಹರಿಣಗಳ ಪಾಲಿಗಿದು ಮೊದಲ ಗೆಲುವು ಎಂಬುದು ಗಮನಾರ್ಹ.
72 ಎಸೆತಗಳನ್ನು ಎದುರಿಸಿದ ಕಾಕ್ ಎಂಟು ಬೌಂಡರಿ ಸಹಿತವಾಗಿ 68 ರನ್ ಗಳಿಸಿ ಔಟಾದರು. ಆಮ್ಲಾ 83 ಎಸ`ೆತಕ್ಕೆ ನಾಲ್ಕು ಬೌಂಡರಿ ಸಹಿತ 41 ರನ್ ಗಳಿಸಿ ಅಜೇಯರಾಗಿ ಉಳಿದರು. 

ಅಂತಿಮವಾಗಿ ಆಫ್ರಿಕಾ ಪರ ಆ್ಯಂಡಿಲ್ ಪೆಹ್ಲುಕಾಯೊ 17 ರನ್ ಗಳಿಸಿ ಅಜೇಯರಾದರು.ಹರಿಣಗಳ ಪಡೆ 28.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟದೊಡನೆ ಗೆಲುವಿನ ನಗು ಬೀರಿದೆ.

ಇನ್ನು ವಿಶ್ವಕಪ್ ಸರಣಿಯಲ್ಲಿ ಸತತ ಮೂರು ಸೋಲು ಹಾಗೂ ಡ್ರಾ ಗಳನ್ನೇ ಕಂಡಿದ್ದ ದಕ್ಷಿಣ ಆಫ್ರಿಕಾಗೆ ಇದು ಮೊದಲ ಗೆಲುವಾಗಿದೆ.ಮೂರು ಅಂಕ ಗಳಿಸಿರುವ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.

ಇನ್ನು ಸತತ ನಾಲ್ಕು ಸೋಲು ಕಂಡ ಅಫ್ಘಾನಿಸ್ಥಾನ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲೇ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.