ಶುಭ್ಮನ್ ಗಿಲ್ ಜೊತೆ ಸಚಿನ್ ಪುತ್ರಿ ಸಾರಾ ಲವ್ವಿ ಡವ್ವಿ? ಹಾರ್ದಿಕ್ ಕಾಲೆಳೆದಿದ್ದೇಕೆ?
ಟೀಂ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಅವರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.

Published On :
ಮುಂಬೈ: ಟೀಂ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಅವರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.
ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಐಪಿಎಲ್ ನಲ್ಲೂ ಶುಭ್ಮನ್ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಶುಭ್ಮನ್ ಹೊಸದಾಗಿ ರೇಂಜ್ ರೋವರ್ ಕಾರು ಖರೀದಿಸಿದ್ದರು. ಅದರ ಮುಂದೆ ನಿಂತು ಫೋಸ್ ನೀಡುತ್ತಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ಫೋಟೋಗೆ ಸಚಿನ್ ಪುತ್ರಿ ಸಾರಾ ಪ್ರತಿಕ್ರಿಯೆ ನೀಡಿ ಶುಭಾಶಯ ತಿಳಿಸಿದ್ದರು. ಈ ಕಾಮೆಂಟ್ ಗೆ ಗಿಲ್ ಕೂಡ ಧನ್ಯವಾದ ತಿಳಿಸಿದ್ದರು. ಇದು ಶುಭ್ಮನ್ ಹಾಗೂ ಸಾರಾ ತೆಂಡೂಲ್ಕರ್ ನಡುವೆ ಗಿಲ್ ಪ್ರೀತಿ ಶುರು ಆಗಿದೆಯಾ ಎಂಬ ಅನುಮಾನ ಮೂಡಿಸಿದೆ.
ಇನ್ನು ಇದಕ್ಕೆ ಹಾರ್ದಿಕ್ ಪಾಂಡ್ಯ ಶುಭ್ಮನ್ ಗಿಲ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಮೋಸ್ಟ್ ವೆಲ್ ಕಮ್ ಫ್ರಮ್ ಹರ್ ಎಂದು ಹೇಳಿದ್ದರು. ಅಲ್ಲದೆ ಇದರೊಂದಿಗೆ ಕಣ್ಣು ಮಿಟುಕಿಸುವ ಇಮೋಜಿ ಕೂಡ ಹಾಕಿದ್ದರು. ಪಾಂಡ್ಯರ ಈ ಪ್ರತಿಕ್ರಿಯೆಯಿಂದ ಶುಭ್ಮನ್ ಹಾಗೂ ಸಾರಾ ನಡುವೆ ಏನೋ ಸಂಬಂಧ ಶುರುವಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sara Tendulkarಸಾರಾ ತೆಂಡೂಲ್ಕರ್Hardik Pandyaಹಾರ್ದಿಕ್ ಪಾಂಡ್ಯCricket Offbeatಕ್ರಿಕೆಟ್ ಸ್ವಾರಸ್ಯShubman Gillಶುಭ್ಮನ್ ಗಿಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


