ಧೋನಿ ಗ್ಲೌವ್ಸ್ ಆಯ್ತು, ಈಗ ಕ್ರಿಸ್ ಗೇಯ್ಲ್ ಬ್ಯಾಟ್ ಗೂ ಐಸಿಸಿ ಆಕ್ಷೇಪ!
ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.

Published On :
ಲಂಡನ್: ಈ ಹಿಂದೆ ಭಾರತ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಗ್ಲೌವ್ಸ್ ಕುರಿತಂತೆ ಆಕ್ಷೇಪ ಎತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಇದೀಗ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ಗೂ ಆಕ್ಷೇಪವೆತ್ತಿದೆ.
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಕ್ರಿಕೆಟ್ ಗಿಂತಲೂ ಕ್ರಿಕೆಟೇತರ ವಿಚಾರಗಳಿಗಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಯ್ಲ್ ಅವರ ಬ್ಯಾಟ್ ವಿಚಾರವಾಗಿ ಮತ್ತೆ ಏಸಿಸಿ ಸುದ್ದಿಗೆ ಗ್ರಾಸವಾಗಿದೆ.
ಧೋನಿ ಅವರು ಬಲಿದಾನ ಗ್ಲೋವ್ಸ್ ತೊಡುವುದಕ್ಕೆ ಒಪ್ಪಿಗೆ ನಿರಾಕರಿಸಿದ ನಂತರ ಕ್ರಿಸ್ ಗೇಯ್ಲ್ ಅವರ ಇಂಥದ್ದೇ ಕೋರಿಕೆಯನ್ನೂ ಐಸಿಸಿ ನಿರಾಕರಿಸಿದೆ. ಸ್ಫೋಟಕ ಬ್ಯಾಟಿಂಗ್ ಗೆ ಖ್ಯಾತಿಯಾಗಿರುವ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಯ್ಲ್ 'ಯೂನಿವರ್ಸ್ ಬಾಸ್' ಎಂದೇ ಖ್ಯಾತಿ ಗಳಿಸಿದವರು. ಇದೀಗ ತಮ್ಮ ಬಿರುದನ್ನೇ ಕ್ರಿಸ್ ಗೇಯ್ಲ್ ಬ್ರ್ಯಾಂಡ್ ಮಾಡಲು ಮುಂದಾಗಿದ್ದು, ಇದೇ ಕಾರಣಕ್ಕೆ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬ್ಯಾಟ್ ಮೇಲೆ 'ಯೂನಿವರ್ಸ್ ಬಾಸ್' ಸ್ಟಿಕರ್ ಅಂಟಿಸಲು ಗೇಯ್ಲ್ ಐಸಿಸಿ ಅನುಮತಿ ಕೇಳಿದ್ದರು. ಆದರೆ ಐಸಿಸಿ ಗೇಯ್ಲ್ ಮನವಿಯನ್ನು ತಿರಸ್ಕರಿಸಿದೆ.
ಈ ವೇಳೆ 'ಪಂದ್ಯದ ವೇಳೆ ಯಾವುದೇ ವೈಯಕ್ತಿಕ ವಸ್ತುಗಳನ್ನ ಬಳಸಬಾರದೆಂದು. ಅಲ್ಲದೇ, ಬಟ್ಟೆಯ ಮೇಲಾಗಲಿ ಅಥವಾ ಕ್ರೀಡಾ ಸಲಕರಣೆಗಳ ಮೇಲೆ ಯಾವುದೇ ವೈಯಕ್ತಿಕ ಸಂದೇಶ ತೋರ್ಪಡಿಸಲು ಅವಕಾಶವಿಲ್ಲ. ಹಾಗೆ ಮಾಡಿದರೆ ಕೌನ್ಸಿಲ್ ನ ನಿಯಮಗಳನ್ನ ಉಲ್ಲಂಘಿಸದಂತಾಗುತ್ತದೆ ಎಂದೂ ಐಸಿಸಿ ಗೇಯ್ಲ್ ಗೆ ಪಾಠ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್ಐಸಿಸಿChris Gayleಕ್ರಿಸ್ ಗೇಯ್ಲ್ICC World Cup 2019ಐಸಿಸಿ ಕ್ರಿಕೆಟ್ ವಿಶ್ವಕಪ್ 2019Universe Bossಯೂನಿವರ್ಸ್ ಬಾಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


