ಕ್ರಿಕೆಟ್

ಬುಮ್ರಾರ ಮೊದಲ ಎಸೆತದಲ್ಲೇ ಬೌಲ್ಡ್, ಬೇಲ್ಸ್ ಬೀಳದೆ ಡೇವಿಡ್ ವಾರ್ನರ್‌ಗೆ ಜೀವದಾನ!

ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ತಮ್ಮ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್‌ರನ್ನು ಬೌಲ್ಡ್ ಮಾಡಿದ್ದರು.

ಬುಮ್ರಾರ ಮೊದಲ ಎಸೆತದಲ್ಲೇ ಬೌಲ್ಡ್, ಬೇಲ್ಸ್ ಬೀಳದೆ ಡೇವಿಡ್ ವಾರ್ನರ್‌ಗೆ ಜೀವದಾನ!
ಜಸ್ ಪ್ರೀತ್ ಬುಮ್ರಾ
Published On :
ಲಂಡನ್: ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ತಮ್ಮ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್‌ರನ್ನು ಬೌಲ್ಡ್ ಮಾಡಿದ್ದರು. ಆದರೆ ಬೇಲ್ಸ್ ಬೀಳದ ಕಾರಣ ಅವರ ಜೀವದಾನ ಸಿಕ್ಕಿದ್ದು ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾ ನೀಡಿದ 353 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಬುಮ್ರಾರ ಬೌಲಿಂಗ್ ಎದುರಿಸಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ವಿಕೆಟ್ ಗೆ ಬಡಿಯಿತು. ಆದರೆ ಬೇಲ್ಸ್ ಕೆಳಗೆ ಬೀಳದ ಕಾರಣ ಬುಮ್ರಾ ಅವರಿಗೆ ನಿರಾಶೆಯಾಯಿತು. 
ವಿಕೆಟ್ ಗೆ ಚೆಂಡು ಬಡಿದರು ಬೇಲ್ಸ್ ಬೀಳದ್ದಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಬೇಸರ ವ್ಯಕ್ತಪಡಿಸಿದರು. 
ಇನ್ನು ಇದೇ ವಿಚಾರವಾಗಿ ನೆಟಿಗರು ಸಹ ಐಸಿಸಿ ವಿರುದ್ಧ ಸಖತ್ ಟ್ರೋಲ್ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.