ಟೀಂ ಇಂಡಿಯಾದ ವೇಗಿ ಬುಮ್ರಾ ಹಿಂದೆ ಬಿದ್ರಾ ನಟಿ ಅನುಪಮಾ? ಸುದ್ದಿ ವೈರಲ್!
ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಪ್ರೇಮಂ ನಟಿ ಅನುಪಮಾ ಪರಮೇಶ್ವರನ್ ಇದೀಗ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ...

Published On :
ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಪ್ರೇಮಂ ನಟಿ ಅನುಪಮಾ ಪರಮೇಶ್ವರನ್ ಇದೀಗ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಜಸ್ ಪ್ರೀತ್ ಬುಮ್ರಾ ಆಡುತ್ತಿದ್ದಾರೆ. ಈ ಮಧ್ಯೆ ಬುಮ್ರಾ ಹೆಸರು ದಕ್ಷಿಣ ಭಾರತದ ನಟಿ ಅನುಪಮಾ ಜತೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬುಮ್ರಾ ಅವರ ಟ್ವೀಟರ್ ಖಾತೆ.
ಅನುಪಮಾ ಅವರು ಜಸ್ ಪ್ರೀತ್ ಬುಮ್ರಾ ಅವರ ಟ್ವೀಟರ್ ಅನ್ನು ಫಾಲೋ ಮಾಡುತ್ತಿದ್ದಾರೆ. ಈ ಖಾತೆಯಲ್ಲಿ ಬುಮ್ರಾ ಫಾಲೋ ಮಾಡುತ್ತಿರುವುದು ಕೇವಲ 25 ಮಂದಿಯನ್ನು ಮಾತ್ರ. ಅದರಲ್ಲಿ ಬಹುತೇಕರು ಕ್ರಿಕೆಟಿಗರೇ. ಅವರ ಮಧ್ಯೆ ನಟಿ ಅನುಪಮಾ ಹೆಸರು ಕಂಡು ಬಂದಿರುವುದು ಇದೇ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಇಬ್ಬರ ನಡುವೆ ಟ್ವೀಟ್ ಗಳು ಸಹ ವಿನಿಮಯವಾಗಿದೆ. ಈ ಎಲ್ಲಾ ವಿಚಾರಗಳಿಂದ ಬುಮ್ರಾ ಮತ್ತು ಅನುಪಮಾ ಲವ್ ನಲ್ಲಿ ಬಿದ್ದಿದ್ದಾರಾ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಈ ಅನುಮಾನಗಳಿಗೆ ಅವರೇ ಉತ್ತರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್tollywoodಟಾಲಿವುಡ್Jasprit Bumrahಜಸ್ ಪ್ರೀತ್ ಬುಮ್ರಾಅನುಪಮಾ ಪರಮೇಶ್ವರನ್Anupama Parameswaran
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


