ಮೊದಲು ಅಂಪೈರ್ ಗಳ ಗುಣಮಟ್ಟದತ್ತ ಗಮನ ಕೊಡಿ, ಧೋನಿ ಗ್ಲೌಸ್ ಬಗ್ಗೆ ಅಲ್ಲ: ಐಸಿಸಿಗೆ ಅಭಿಮಾನಿಗಳ ತಪರಾಕಿ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೇನಾ ಬಲಿದಾನದ ಚಿಹ್ನೆ ಇರುವ ಗ್ಲೌಸ್ ಧರಿಸಿದ್ದ ಎಂಎಸ್ ಧೋನಿ ಪರವಾಗಿ ಟ್ವಿಟರ್ ನಲ್ಲಿ #DhoniKeepTheGlove ಅಭಿಯಾನ ಪ್ರಾರಂಭವಾಗಿದೆ.

Published On :
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೇನಾ ಬಲಿದಾನದ ಚಿಹ್ನೆ ಇರುವ ಗ್ಲೌಸ್ ಧರಿಸಿದ್ದ ಎಂಎಸ್ ಧೋನಿ ಪರವಾಗಿ ಟ್ವಿಟರ್ ನಲ್ಲಿ #DhoniKeepTheGlove ಅಭಿಯಾನ ಪ್ರಾರಂಭವಾಗಿದೆ.
ಗ್ಲೌಸ್ ನಲ್ಲಿರುವ ಚಿಹ್ನೆ ತೆಗೆಯುವಂತೆ ಐಸಿಸಿ ಒತ್ತಡದ ಹೊರತಾಗಿಯೂ ಬಿಸಿಸಿಐ ಧೋನಿ ಬೆನ್ನಿಗೆ ನಿಂತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಧೋನಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಐಸಿಸಿಗೆ ಝಾಡಿಸಿದ್ದಾರೆ.
ಧೋನಿ ಗ್ಲೌಸ್ ಗೆ ಆಕ್ಷೇಪ ವ್ಯಕ್ತಪಡಿಸಿರುವ ಐಸಿಸಿ ವಿರುದ್ಧ ಕೆಂಡಾಮಂಡಲವಾಗಿರುವ ಅಭಿಮಾನಿಗಳ ಬಳಗ, "ಮೊದಲು ಕಳಪೆ ಅಂಪೈರ್ ಗಳ ಗುಣಮಟ್ಟದತ್ತ ಗಮನ ಹರಿಸಿ, ಧೋನಿಯ ಗ್ಲೌಸ್ ಬಗ್ಗೆ ಅಲ್ಲ ಎಂದು ಟ್ವಿಟರ್ ನಲ್ಲಿ ಸಲಹೆ ನೀಡಿದ್ದಾರೆ.
ಅಂಪೈರ್ ಗಳ ಗುಣಮಟ್ಟದೆಡೆಗೆ ಐಸಿಸಿ ಕುರುಡಾಗಿರುವುದನ್ನು ಧೋನಿ ಅಭಿಮಾನಿಗಳು ಟ್ರೋಲ್ ಮಾಡಲು ಪ್ರಾರಂಭಿಸಿದ್ದು, ಈ ಪೋಸ್ಟ್ ಗಳು ವೈರಲ್ ಆಗತೊಡಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Dhoniಎಂಎಸ್ ಧೋನಿfansಗ್ಲೌಸ್ICC World Cup 2019ಐಸಿಸಿ ವಿಶ್ವಕಪ್ 2019Army Insignia Glovesಸೇನಾ ಚಿಹ್ನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


